Ad imageAd image

10 ಕೋಟಿ ರೂ. ಅಕ್ರಮ ವ್ಯವಹಾರದಲ್ಲಿ ಜೂನಿಯರ್ ಇಂಜಿನಿಯರ್ ಅಮಾನತು : ಒಂದೇ ವಾರದಲ್ಲಿ ವಾಪಾಸ್

Bharath Vaibhav
10 ಕೋಟಿ ರೂ. ಅಕ್ರಮ ವ್ಯವಹಾರದಲ್ಲಿ ಜೂನಿಯರ್ ಇಂಜಿನಿಯರ್ ಅಮಾನತು : ಒಂದೇ ವಾರದಲ್ಲಿ ವಾಪಾಸ್
WhatsApp Group Join Now
Telegram Group Join Now

ಕೊಪ್ಪಳ: ಬರೋಬ್ಬರಿ 10 ಕೋಟಿ ರೂಪಾಯಿ ಅಕ್ರಮ ವ್ಯವಹಾರ ನಡೆಸಿದ ಆರೋಪದಲ್ಲಿ ಅಮಾನತುಗೊಂಡಿದ್ದ ಕೊಪ್ಪಳ ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ.

ಅಮಾನತುಗೊಂಡಿದ್ದ ಹತ್ತೇ ದಿನಗಳಲ್ಲಿ ಪೌರಾಡಳಿತ ಇಲಾಖೆ ಸೋಮಲಿಂಗಪ್ಪ ಅವರ ಅಮಾನತು ಆದೇಶವನ್ನು ಹಿಂಪಡೆದಿದೆ.

ಪೌರಾಡಳಿತ ಇಲಾಖೆಯ ಈ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಗಿದೆ. ಸೋಮಲಿಂಗಪ್ಪ ವಿರುದ್ಧ ಸುಮಾರು 10 ಕೋಟಿ ರೂಪಾಯಿ ಅಕ್ರಮ ಆರೋಪ ಕೇಳಿಬಂದಿತ್ತು. 2023-24 ಹಾಗೂ 2024-25ನೇ ಸಾಲಿನ ಸುಮಾರು 336 ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ಪೌರಾಡಳಿತ ಇಲಾಖೆ ಅವರನ್ನು ಅಮಾನತು ಮಾಡಿತ್ತು.

ಅಮಾನತು ಆದೇಶದ ವಿರುದ್ಧ ಸೋಮಲಿಂಗಪ್ಪ ಧಾರವಾಡ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದರು. ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಸಿಕ್ಕ ಹಿನ್ನೆಲೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರಿಂದ ಕೇವಲ 10 ದಿನಗಳೊಳಗೆ ಅಮಾನತು ವಾಪಸ್ ಪಡೆಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಲೋಕಾಯುಕ್ತ ತನಿಖೆಯಲ್ಲಿ ಗಂಭೀರ ಅಕ್ರಮಗಳು ಬಹಿರಂಗವಾಗಿದ್ದರೂ, ತ್ವರಿತವಾಗಿ ಆದೇಶ ಹಿಂಪಡೆಯಲ್ಪಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!