Ad imageAd image

ರಾಮಲಲ್ಲಾನ ಹಣೆಗೆ ಮುತ್ತಿಕ್ಕಿದ ಸೂರ್ಯದೇವ : ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ

Bharath Vaibhav
ರಾಮಲಲ್ಲಾನ ಹಣೆಗೆ ಮುತ್ತಿಕ್ಕಿದ ಸೂರ್ಯದೇವ : ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ
WhatsApp Group Join Now
Telegram Group Join Now

ಉತ್ತರ ಪ್ರದೇಶ/ ಅಯೋಧ್ಯೆ : ಅಯೋಧ್ಯೆಯ ಭವ್ಯ ಮಂದಿರದಲ್ಲಿ ಬಾಲರಾಮನ ದರ್ಶನಕ್ಕೆ ಕೋಟಿ ಕಣ್ಣುಗಳು ಕಾಯುತ್ತಿದ್ದರೆ, ಇತ್ತ ಸಾಕ್ಷಾತ್ ಸೂರ್ಯದೇವನೇ ರಾಮಲಲ್ಲಾನ ಹಣೆಗೆ ಮುತ್ತಿಕ್ಕುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ ಬರೆದಿದ್ದಾನೆ.

ರಾಮನವಮಿಯ ಶುಭ ದಿನದಂದು ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ‘ಸೂರ್ಯ ತಿಲಕ’ ಕಂಗೊಳಿಸಿದ್ದು, ಇಡೀ ಅಯೋಧ್ಯೆ ರಾಮನಾಮ ಸ್ಮರಣೆಯಲ್ಲಿ ಮಿಂದೆದ್ದಿದೆ.

ಪ್ರತಿಷ್ಠಾಪನೆಯ ನಂತರದ ಮೊದಲ ಜನ್ಮೋತ್ಸವವು ವಿಜ್ಞಾನ ಮತ್ತು ಆಧ್ಯಾತ್ಮದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.

ರಾಮನವಮಿಯ ಪವಿತ್ರ ಘಳಿಗೆಯಲ್ಲಿ, ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಸಾಕ್ಷಾತ್ ಸೂರ್ಯದೇವನೇ ಬಾಲರಾಮನ ಹಣೆಗೆ ಮುತ್ತಿಕ್ಕುವ ಮೂಲಕ ‘ಸೂರ್ಯ ತಿಲಕ’ವಿಟ್ಟು ಹರಸಿದ್ದಾನೆ.

ಅಯೋಧ್ಯೆಯ ನೂತನ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾದ ನಂತರದ ಮೊದಲ ಜನ್ಮೋತ್ಸವ ಇದಾಗಿದ್ದು, ಸೂರ್ಯರಶ್ಮಿಯು ರಾಮನ ಹಣೆಯ ಮೇಲೆ ಸುಮಾರು 3 ರಿಂದ 4 ನಿಮಿಷಗಳ ಕಾಲ ಕಂಗೊಳಿಸಿದ ಆ ಐತಿಹಾಸಿಕ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಈ ಅಪೂರ್ವ ದೃಶ್ಯವು ಇಡೀ ರಾಮಜನ್ಮಭೂಮಿಯನ್ನು ಭಕ್ತಿಪರವಶತೆಯ ಶಿಖರಕ್ಕೆ ಕೊಂಡೊಯ್ದಿದೆ.

ಸೂರ್ಯ ತಿಲಕದ ವೈಭವ : ಅತ್ಯಾಧುನಿಕ ‘ಆಪ್ಟೋ-ಮೆಕ್ಯಾನಿಕಲ್’ ವ್ಯವಸ್ಥೆಯ ಮೂಲಕ ಸೂರ್ಯನ ಕಿರಣಗಳನ್ನು ನೇರವಾಗಿ ಬಾಲರಾಮನ ಹಣೆಯ ಮೇಲೆ ಬೀಳುವಂತೆ ಮಾಡಲಾಯಿತು. ಸುಮಾರು 58 ಮಿಲಿ ಮೀಟರ್ ಗಾತ್ರದ ಸೂರ್ಯ ತಿಲಕವು 3 ರಿಂದ 4 ನಿಮಿಷಗಳ ಕಾಲ ವಿಗ್ರಹದ ಮೇಲೆ ರಾರಾಜಿಸಿತು.

ವಿಶೇಷ ಅಲಂಕಾರ: ರಾಮನವಮಿ ಹಿನ್ನೆಲೆಯಲ್ಲಿ ರಾಮಲಲ್ಲಾನಿಗೆ ಚಿನ್ನಾಭರಣಗಳು, ಅಮೂಲ್ಯ ರತ್ನಗಳು ಮತ್ತು ರೇಷ್ಮೆ ವಸ್ತ್ರಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಂದಿರದಾದ್ಯಂತ ಟನ್‌ಗಟ್ಟಲೆ ಹೂವುಗಳಿಂದ ಶೃಂಗರಿಸಲಾಗಿದ್ದು, ಭಕ್ತರಿಗೆ ಸ್ವರ್ಗವೇ ಧರೆಗಿಳಿದ ಅನುಭವ ನೀಡಿತು.

ಐತಿಹಾಸಿಕ ಕ್ಷಣ: ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ಜನ್ಮದಿನದ ಮಹಾ ಮಂಗಳಾರತಿ ನಡೆಯುತ್ತಿದ್ದಂತೆಯೇ ಸೂರ್ಯ ಕಿರಣಗಳು ರಾಮನ ಹಣೆಯನ್ನು ಸ್ಪರ್ಶಿಸಿದವು. ಇದನ್ನು ಕಂಡು ಭಕ್ತರು ಭಾವಪರವಶರಾಗಿ ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು.

ಭಕ್ತ ಸಾಗರ: ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಹರಿದು ಬಂದಿದ್ದರು. ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀರಾಮನ ದರ್ಶನ ಪಡೆದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!