Ad imageAd image

ದಾಖಲೆ ಬರೆದ ಧುರಂಧರ್ 2′ : ಒಂದೇ ವಾರದಲ್ಲಿ 1,006 ಕೋಟಿ ರೂ. ಗಳಿಸಿ ಇತಿಹಾಸ

Bharath Vaibhav
ದಾಖಲೆ ಬರೆದ ಧುರಂಧರ್ 2′ : ಒಂದೇ ವಾರದಲ್ಲಿ 1,006 ಕೋಟಿ ರೂ. ಗಳಿಸಿ ಇತಿಹಾಸ
WhatsApp Group Join Now
Telegram Group Join Now

ಬೆಂಗಳೂರು: ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಸುನಾಮಿ ಎಬ್ಬಿಸಿದೆ.

ವರದಿಯ ಪ್ರಕಾರ, ಈ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ (7 ದಿನಗಳಲ್ಲಿ) ವಿಶ್ವಾದ್ಯಂತ 1,006 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

2026ರಲ್ಲಿ ಬಿಡುಗಡೆಯಾಗಿ 1000 ಕೋಟಿ ರೂಪಾಯಿ ಗಡಿ ದಾಟಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ವಿಶೇಷವೆಂದರೆ, ಕರ್ನಾಟಕದಲ್ಲಿ ಈ ಚಿತ್ರವು ಮೊದಲ ವಾರದಲ್ಲೇ 73 ಕೋಟಿ ರೂ. ಗಳಿಸುವ ಮೂಲಕ ಪರಭಾಷಾ ಚಿತ್ರಗಳ ಪೈಕಿ ದೊಡ್ಡ ದಾಖಲೆ ಬರೆದಿದೆ.

ದಾಖಲೆಗಳ ಉಡೀಸ್: ಅತಿ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಎರಡನೇ ಚಿತ್ರ ಇದಾಗಿದೆ. (ಪುಷ್ಪಾ 2 ಮೊದಲ ಸ್ಥಾನದಲ್ಲಿದೆ – 6 ದಿನಗಳು).ಈ ಸಾಧನೆಯ ಮೂಲಕ ‘ಧುರಂಧರ್ 2’ ಚಿತ್ರವು ಬಾಹುಬಲಿ 2 (9 ದಿನಗಳು), ಆರ್‌ಆರ್‌ಆರ್, ಕೆಜಿಎಫ್ 2 ಮತ್ತು ಕಲ್ಕಿ 2898 ಎಡಿ ಸಿನಿಮಾಗಳ ದಾಖಲೆಗಳನ್ನು ಪುಡಿಪುಡಿ ಮಾಡಿದೆ.ರಣವೀರ್ ಸಿಂಗ್ ಅವರೊಂದಿಗೆ ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಂಜಯ್ ದತ್ ಅವರಂತಹ ದಿಗ್ಗಜ ನಟರ ಅಭಿನಯ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಶಿವಣ್ಣ ಪ್ರಶಂಸೆ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆದಿತ್ಯ ಧರ್, ಶಿವಣ್ಣ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಈ ಚಿತ್ರವು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪಂಚಭಾಷೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಹೆಚ್ಚಿನ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!