Ad imageAd image

SSLC ಪರೀಕ್ಷೆ 625 ರಿಂದ 525 ಕ್ಕೆ ಇಳಿಕೆ : ಇನ್ಮುಂದೆ ತೃತೀಯ ಭಾಷೆಗೆ ಗ್ರೇಡಿಂಗ್

Bharath Vaibhav
SSLC ಪರೀಕ್ಷೆ 625 ರಿಂದ 525 ಕ್ಕೆ ಇಳಿಕೆ : ಇನ್ಮುಂದೆ ತೃತೀಯ ಭಾಷೆಗೆ ಗ್ರೇಡಿಂಗ್
Madhu bangaarappa
WhatsApp Group Join Now
Telegram Group Join Now

ಬೆಂಗಳೂರು: ಕರ್ನಾಟಕ ಶಿಕ್ಷಣ ಇಲಾಖೆಯು SSLC ಪರೀಕ್ಷಾ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ತೃತೀಯ ಭಾಷೆಯನ್ನು ಕೇವಲ ‘ಗ್ರೇಡಿಂಗ್’ ವಿಷಯವನ್ನಾಗಿ ಪರಿವರ್ತಿಸುವ ಮೂಲಕ, ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿದೆ. ಇದರಿಂದ ವಿದ್ಯಾರ್ಥಿಗಳ ಶೇಕಡಾವಾರು ಅಂಕಗಳ ಲೆಕ್ಕಾಚಾರ ಸುಲಭವಾಗಲಿದ್ದು, ತೃತೀಯ ಭಾಷೆಯ ಅಂಕಗಳ ಆತಂಕ ದೂರವಾಗಲಿದೆ.

ರಾಜ್ಯದ SSLC ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಐತಿಹಾಸಿಕ ತೀರ್ಮಾನ ಕೈಗೊಂಡಿದೆ.

ಈ ವರ್ಷದಿಂದಲೇ ಜಾರಿಗೆ ಬರುವಂತೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿ ದೊಡ್ಡ ಮಟ್ಟದ ಕಡಿತ ಮಾಡಲಾಗಿದ್ದು, ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸದಿರಲು ನಿರ್ಧರಿಸಲಾಗಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಈವರೆಗೆ SSLC ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಹೊಸ ನಿಯಮದಂತೆ ಇನ್ಮುಂದೆ 525 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ.

ಅಂಕಗಳ ಕಡಿತ: ಈವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒಟ್ಟು ಅಂಕಗಳು 625 ಇರುತ್ತಿದ್ದವು. ಆದರೆ ಹೊಸ ನಿಯಮದಂತೆ ಇನ್ಮುಂದೆ ಕೇವಲ 525 ಅಂಕಗಳಿಗೆ ಮಾತ್ರ ಫಲಿತಾಂಶವನ್ನು ಪರಿಗಣಿಸಲಾಗುತ್ತದೆ.

ತೃತೀಯ ಭಾಷೆಗೆ ಗ್ರೇಡಿಂಗ್: ಹಿಂದಿ ಸೇರಿದಂತೆ ಎಲ್ಲಾ ತೃತೀಯ ಭಾಷೆಗಳ 100 ಅಂಕಗಳನ್ನು ಒಟ್ಟು ಮೊತ್ತದಿಂದ ಕಡಿತಗೊಳಿಸಲಾಗಿದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳ ಬದಲಿಗೆ ಕೇವಲ ‘ಗ್ರೇಡ್’ (Grade) ನೀಡಲಾಗುತ್ತದೆ.

ಫಲಿತಾಂಶದ ಮೇಲೆ ಪರಿಣಾಮವಿಲ್ಲ: ತೃತೀಯ ಭಾಷೆಯ ಗ್ರೇಡ್‌ಗಳು ವಿದ್ಯಾರ್ಥಿಯ ಒಟ್ಟು ಶೇಕಡಾವಾರು ಅಂಕಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕೇವಲ ಪ್ರಥಮ ಭಾಷೆ (125 ಅಂಕ), ದ್ವಿತೀಯ ಭಾಷೆ (100 ಅಂಕ) ಮತ್ತು ಮೂರು ಕೋರ್ ವಿಷಯಗಳ (ತಲಾ 100 ಅಂಕ) ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗುತ್ತದೆ.

ತೃತೀಯ ಭಾಷೆಗೆ ಕೊಕ್: ಹಿಂದಿ, ಅರೇಬಿಕ್, ಉರ್ದು, ತುಳು, ತೆಲುಗು, ಸಂಸ್ಕೃತ, ಕೊಂಕಣಿ ಮತ್ತು ತಮಿಳು ಸೇರಿದಂತೆ ಎಲ್ಲಾ ತೃತೀಯ ಭಾಷೆಗಳ 100 ಅಂಕಗಳನ್ನು ಒಟ್ಟು ಫಲಿತಾಂಶದಿಂದ ಕೈಬಿಡಲಾಗಿದೆ.

ಅಂಕದ ಬದಲು ಗ್ರೇಡ್: ತೃತೀಯ ಭಾಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳ ಬದಲಿಗೆ ಕೇವಲ ‘ಗ್ರೇಡ್’ (Grade) ನೀಡಲಾಗುತ್ತದೆ. ಈ ಗ್ರೇಡ್‌ಗಳನ್ನು ಒಟ್ಟು ಶೇಕಡಾವಾರು (Percentage) ಲೆಕ್ಕಾಚಾರಕ್ಕೆ ಬಳಸಲಾಗುವುದಿಲ್ಲ.

ಯಾರಿಗೆ ಅನ್ವಯ?: ಈ ಹೊಸ ನಿಯಮವು 2025-26ನೇ ಸಾಲಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!