ಸೇಡಂ: ತಾಲೂಕಿನ ಯಾನಗುಂದಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಸ್ಪೀಡ್ ಬ್ರೇಕರ್ ಬೇಕೆಂದು ಮಾನ್ಯ ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪವಿಭಾಗ ಸೇಡಂ ರವರಿಗೆ ಅಂಬೇಡ್ಕರ್ ಯುವ ಸೇನೆ ತಾಲೂಕ ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರಾದ ಗೋಪಾಲ ಎಲ್ ನಾಟಿಕರ್ ಅವರು ಸೇಡಂ ತಾಲೂಕಿನ ಯಾನಗುಂದಿ ಗ್ರಾಮದ ಮುಖ್ಯ ರಸ್ತೆಯ ಬಸ್ ನಿಲ್ದಾಣ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಮತ್ತು ನಾರಾಯಣಪೇಟಕ್ಕೆ ಹೋಗುವ ರಸ್ತೆಯ ಮೇಲೆ ಇತ್ತೀಚಿನ ದಿನಗಳಲ್ಲಿ ವಾಹನಗಳ ವೇಗ ಹೆಚ್ಚಿರುವುದರಿಂದ ಆಗಾಗ್ಗೆ ವಾಹನ ಅಪಘಾತಗಳು ಸಂಭವಿಸಿ ಮರಣಗಳಾಗುತ್ತಿವೆ. ಈ ರಸ್ತೆ ಮೂಲಕ ಶಾಲಾ ಮಕ್ಕಳು, ವೃದ್ಧರು, ಹಾಗೂ ಸಾರ್ವಜನಿಕರು ಪ್ರತಿ ದಿನ ಮಾತಾ ಮಾಣಿಕೇಶ್ವರಿ ದೇವಸ್ಥಾನಕ್ಕೆ ಸಂಚಾರ ಮಾಡುತ್ತಾರೆ.
ಆದ್ದರಿಂದ ನಮ್ಮ ಮನವಿಯನ್ನು ಗಂಭೀರ ಸ್ವರೂಪದೆದ್ದೆಂದು ಪರಿಗಣಿಸಿ ತಕ್ಷಣವೇ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕಿಸಿ ಸಂಚಾರಕ್ಕೆ ಮತ್ತು ಅಪಘಾತಗಳನ್ನು ತಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




