—————————————————————————————ಉದ್ಘಾಟನೆ ಪಂದ್ಯದಲ್ಲಿ ಆರ್‌ಸಿಬಿಗೆ ಸನ್‌ರೈಸರ್ಸ್ ಹೈದರಾಬಾದ್ ಎದುರಾಳಿ
ಬೆಂಗಳೂರು: ಟ್ವೆಂಟಿ-೨೦ ಕ್ರಿಕೆಟ್‌ನ ಪ್ರತಿಷ್ಠಿತ ಪಂದ್ಯಾವಳಿಯಾಗಿರುವ ಐಪಿಎಲ್ ಚುಟುಕು ಪಂದ್ಯಾವಳಿಯ ಹಬ್ಬ ನಾಳೆ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತೆರೆದುಕೊಳ್ಳಲಿದೆ.
ನಾಳೆ ( ದಿ. ೨೮ ರಿಂದ ಏ. ೨೦ ರವರೆಗೆ ನಡೆಯುವ ಮೊದಲ ಹಂತದ ೧೯ ನೇ ಐಪಿಎಲ್ ಪಂದ್ಯಾವಳಿಯ ಆರಂಭವಾಗುತ್ತಿದೆ. ಉದ್ಘಾಟನೆ ಪಂದ್ಯದಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಆರ್‌ಸಿಬಿ ತಂಡಕ್ಕೆ ಪಾಟೀದಾರ್ ನೇತೃತ್ವ ವಹಿಸಲಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಇಶಾನ್ ಕಿಶನ್ ಮುನ್ನಡೆಸಲಿದ್ದಾರೆ.
ಕಳೆದ ಬಾರಿಯ ಚಾಂಪಿಯನ್ ಆರ್‌ಸಿಬಿ ಸಹಜವಾಗಿಯೇ ಎತ್ತರದ ಮಾನಸಿಕ ಸ್ಥೆöರ‍್ಯದೊಂದಿಗೆ ಕಣಕ್ಕೆ ಇಳಿಯುತ್ತಿದೆ. ಅತ್ತ ಇಶಾನ್ ಕಿಶನ್ ಬಳಗ ಕೂಡ ದುರ್ಬಲವಾಗಿಲ್ಲ ಒಟ್ಟಿನಲ್ಲಿ ಉದ್ಘಾಟನೆ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗುತ್ತಿದೆ.




