ಬೆಂಗಳೂರು: ಯುಗಾದಿ, ರಂಜಾನ್ ಸೇರಿದಂತೆ ಕಳೆದ ವಾರ ಸಾಲು ಸಾಲು ಸರ್ಕಾರಿ ರಜೆಯಿದ್ದ ಕಾರಣ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಮಾರ್ಚ್ 28. 29ರಂದು ರಜಾ ದಿನಗಳಂದು ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯನಿರ್ವಹಿಸಲಿವೆ.
ಶನಿವಾರ ಮತ್ತು ಭಾನುವಾರ ರಜಾ ದಿನಗಳಂದು ಕಾರ್ಯನಿರ್ವಹಿಸುವಂತೆ ಎಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಕಂದಾಯ ಇಲಾಖೆ ಆದೇಶಿಸಿದೆ.
ಮಾರ್ಚ್ 28ರಂದು ನಾಲ್ಕನೇ ಶನಿವಾರ ಮತ್ತು ಮಾರ್ಚ್ 29ರಂದು ಭಾನುವಾರ ಸರ್ಕಾರಿ ರಜೆ ಇದೆ. ಈ ರಜಾ ದಿನಗಳನ್ನು ಕರ್ತವ್ಯ ನಿರ್ವಹಿಸುವ ದಿನ ಎಂದು ಪರಿಗಣಿಸಿ ಎರಡೂ ದಿನವೂ ಕಾರ್ಯನಿರ್ವಹಿಸುವಂತೆ ಕಂದಾಯ ಇಲಾಖೆ ನೋಂದಣಿ ಮತ್ತು ಮುದ್ರಾಂಕ ವಿಭಾಗ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.




