Ad imageAd image

ದಲಿತರು ತೆರಿಗೆ ಕಟ್ಟುವುದಿಲ್ಲ ಅದಕ್ಕೆ ಸ್ವಚತೆ ಕ್ರಮ ಕೈಗೊಳ್ಳುವುದಿಲ್ಲ ಪಿಡಿಓ ಹೇಳಿಕೆ: ಆಕ್ರೋಶ ವ್ಯಕ್ತಪಡಿಸುತ್ತಿರುವ ದಲಿತ ಮುಖಂಡರು.

Bharath Vaibhav
ದಲಿತರು ತೆರಿಗೆ ಕಟ್ಟುವುದಿಲ್ಲ ಅದಕ್ಕೆ ಸ್ವಚತೆ ಕ್ರಮ ಕೈಗೊಳ್ಳುವುದಿಲ್ಲ ಪಿಡಿಓ ಹೇಳಿಕೆ: ಆಕ್ರೋಶ ವ್ಯಕ್ತಪಡಿಸುತ್ತಿರುವ ದಲಿತ ಮುಖಂಡರು.
WhatsApp Group Join Now
Telegram Group Join Now

ಸೇಡಂ: ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು ದಲಿತ ಸಮುದಾಯದ ಜನರ ಜೊತೆ ಬೇಜವಾಬ್ದಾರಿಯಾಗಿ ಮಾತನಾಡಿರುವ ಘಟನೆ ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮೊತಕಪಲ್ಲಿ ಗ್ರಾಮ ಪಂಚಾಯಿತಿಯ ದಲಿತರ ಓಣಿಯಲ್ಲಿ ಸ್ವಚತೆ ಇಲ್ಲದೆ ಮೋರಿಗಳು ಗಬ್ಬುನಾರುತ್ತಿವೆ. ಹಾಗೂ ರಸ್ತೆಗಳ ಸುಧಾರಣೆ ಸರಿಯಾಗಿ ಇಲ್ಲದ ಕಾರಣ ಸಾರ್ವಜನಿಕರಿಗೆ ಮತ್ತು ವೃದ್ಧ ಜನಾಂಗಕ್ಕೆ ತುಂಬಾ ತೊಂದರೆಯಾಗಿದೆ.

ಸ್ವಚ್ಛತೆ ಕ್ರಮ ಕೈಗೊಳ್ಳಬೇಕು ಎಂದು ಪಿಡಿಓ ಗುರುರಾಜ್ ಅವರಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿಸಿದ್ದಾರೆ ಈ ಕುರಿತು ತಾಲೂಕು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು ಆದರೂ ಸಹ ಪಿಡಿಓ ಗುರುರಾಜ್ ಅವರು ತನ್ನ ಬೇಜವಾಬ್ದಾರಿಯಿಂದ ಕೆಲಸ ಮಾಡದೆ ಇದ್ದುದ್ದಲ್ಲದೆ ಕೇಳಿದವರಿಗೆ ನೀವು ದಲಿತರು ನಿಮ್ಮ ಓಣಿಯಿಂದ ಯಾವುದೇ ತೆರಿಗೆ ಬಂದಿಲ್ಲ ಅದಕ್ಕೆ ನಾವು ಸ್ವಚತೆ ಮಾಡಿಸುವುದಿಲ್ಲ ನೀವು ಯಾರಿಗೆ ಬೇಕಾದರೂ ಹೇಳಿಕೊಳ್ಳಿ ತೆರಿಗೆ ಕಟ್ಟಿದ್ದಾರೆ ಮಾತ್ರ ಕೆಲಸ ಆಗುವುದು ಇಲ್ಲವಾದಲ್ಲಿ ಅದೇ ಮೋರಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಿ ಎಂಬಂತೆ ಮಾತನಾಡಿದರೆ. ಇವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ತೆರಿಗೆ ವಸೂಲಿ ಮಾಡಿದ್ದಾರೆ ಎಂಬುದು ನಮಗೆ ಲೆಕ್ಕ ತಿಳಿಸಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಲಿತ ಸಮುದಾಯದ ಜೊತೆ ಇಂತಹ ವರ್ತನೆ ಮಾಡುತ್ತಿರುವ ಪಿಡಿಓ ಗುರುರಾಜ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

ಕೆಲಸ ಮಾಡುವವರಿಗೆ ಸಂಬಳ ಪಾವತಿ ಆಗಿಲ್ಲ ಆದ ಕಾರಣ ಸ್ವಚತೆ ಮಾಡುವಲ್ಲಿ ಸ್ವಲ್ಪ ತಡವಾಗಿದೆ ಮೋರಿಗಳನ್ನು ಸ್ವಚತೆ ಮಾಡಿ ಪಕ್ಕದಲ್ಲಿ ಹಾಕಲಾಗಿದೆ ಅದನ್ನು ಕೂಡಲೇ ಪಂಚಾಯತ್ ವಾಹನದ ಮುಖಾಂತರ ತೆರವುಗೊಳಿಸಲಾಗುವುದು.- ಪಿಡಿಓ ಗುರುರಾಜ್

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!