ಢಾಕ್ಕಾ: ಬಾಂಗ್ಲಾದೇಶದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳುವ ಮೂಲಕ ಅಲ್ಲಿನ ನೂತನ ಸರಕಾರ ಪಂದ್ಯಗಳ ನೇರ ಪ್ರಸಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಯುವ ಹಾಗೂ ಕ್ರೀಡಾ ಖಾತೆ ರಾಜ್ಯ ಸಚಿವ ಅನಿಮುಲ್ ಹಕ್ ಅವರು ಮಾತನಾಡಿ ಹಿಂದಿನ ಸರಕಾರ ಐಪಿಎಲ್ ಪಂದ್ಯಗಳ ನೇರ ಪ್ರಸಾರವನ್ನು ರದ್ದುಗೊಳಿಸಿತ್ತು. ಇಂದಿನ ಸರಕಾರ ಸಂಬAಧಪಟ್ಟವರ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಬಾಂಗ್ಲಾದೇಶದಲ್ಲಿ ಮತ್ತೇ ಐಪಿಎಲ್ ಪಂದ್ಯಗಳ ನೇರ ಪ್ರಸಾರಕ್ಕೆ ಕ್ರಮ ವಹಿಸಿದೆ ಎಂದರು.




