ಬೆಂಗಳೂರು: ಐಪಿಎಲ್ ೨೦೨೬ ಕ್ರಿಕೆಟ್ ಹಬ್ಬವು ಉದ್ಯಾನ ನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಎA. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೇ ಕ್ರಿಕೆಟ್ ರೀ ಎಂಟ್ರಿಯಾಗಿದ್ದು, ಒಂದೆಡೆ ಸಂಭ್ರಮವಾದರೇ, ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿಕೊಳ್ಳಬೇಕೆಂಬ ಕಾತುರ ಆರ್ಸಿಬಿ ಅಭಿಮಾನಿಗಳಿಗೆ ಇದೆ.
ಎರಡು ಬಲಿಷ್ಠ ತಂಡಗಳು ಉದ್ಘಾಟನೆ ಪಂದ್ಯದಲ್ಲಿ ಕಾದಾಟಕ್ಕೆ ಇಳಿದಿದ್ದು, ಮೊದಲು ಬ್ಯಾಟಿಂಗ್ ಆರಂಭಿಸಿರುವ ಎಸ್.ಆರ್.ಎಚ್ ೨.೧ ಓವರುಗಳಲ್ಲಿ ೧ ವಿಕೆಟ್ಗೆ ೧೮ ರನ್ ಗಳಿಸಿತ್ತು. ಅಭಿಷೇಕ್ ಶರ್ಮಾ ಬೇಗನೆ ನಿರ್ಗಮಿಸಿದ್ದು, ಆರ್.ಸಿ.ಬಿ. ಅಭಿಮಾನಿಗಳಿಗೆ ಖುಷಿ ತಂದಿತು.
ಐಪಿಎಲ್ ಆರಂಭ: ಬೇಗನೆ ನಿರ್ಗಮಿಸಿದ ಅಭಿಷೇಕ್ ಶರ್ಮಾ




