Ad imageAd image

ಬಾಳೆ ಹಣ್ಣು ಸುಲಿದಂತೆ ಸುಲಭವಾಗಿ ಬ್ಯಾಟ್ ಬೀಸಿದ ದೇವದತ್

Bharath Vaibhav
ಬಾಳೆ ಹಣ್ಣು ಸುಲಿದಂತೆ ಸುಲಭವಾಗಿ ಬ್ಯಾಟ್ ಬೀಸಿದ ದೇವದತ್
WhatsApp Group Join Now
Telegram Group Join Now

ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ ೨೦೧ ರನ್‌ಗಳಿಸಿದ್ದಾಗ ಆ ತಂಡಕ್ಕೆ ಶುಭಾರಂಭ ಮಾಡುವ ಆಸೆ ಚಿಗುರು ಒಡೆದಿತ್ತು. ಆದರೆ ವಿರಾಟ್- ದೇವದತ್ತ ಪೆಡಿಕಲ್ ಆಟ ಸನ್‌ರೈಸರ್ಸ್ ಕನಸ್ಸನ್ನು ನುಚ್ಚುನೂರು ಮಾಡಿತು.
ಕನ್ನಡದ ಹುಡುಗ ದೇವದತ್ತ ಪೆಡಿಕಲ್ ಐಪಿಎಲ್ ಪಂದ್ಯಕ್ಕೂ ಮುನ್ನ ರಣಜಿ ಟ್ರೋಫಿ ಹಾಗೂ ದುಲೀಪ್ ಟ್ರೋಫಿ, ಸೈಯದ್ ಮುಸ್ತಾಕ್ ಅಲಿ ಪಂದ್ಯಾವಳಿಯಲ್ಲಿ ನಿರಂತರ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ.
ಐಪಿಎಲ್ ಆರಂಭ ಪಂದ್ಯದಲ್ಲಿ ದೇವದತ್ತ ಆಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ವಿರಾಟ್ ಹಾಗೂ ದೇವದತ್ ಬಹುಬೇಗನೆ ಶತಕದ ಪಾಲುಗಾರಿಕೆ ನಿಭಾಯಿಸಿ ಆರ್‌ಸಿಬಿ ಕೆಲಸವನ್ನು ಹಗುರ ಮಾಡಿದರು.
ಜಯದೇವ್ ಉನದ್ಕತ್ ಒಬ್ಬರೇ ಅನುಭವಿ ಬೌಲರ್‌ನನ್ನು ಹೊಂದಿದ ಸನ್‌ರೈಸರ್ಸ್ ಬಹುತೇಕ ಪಂದ್ಯವನ್ನು ಬೌಲಿಂಗ್ ವೈಫಲ್ಯದಿಂದಲೇ ಕಳೆದುಕೊಂಡಿತು. ಚುಟುಕು ಪಂದ್ಯದಲ್ಲಿ ೨೦೧ ಚಿಕ್ಕ ಮೊತ್ತವೆನ್ನಲ್ಲ. ಆದರೆ ಹಿಡಿತವಿಲ್ಲದ ಬೌಲಿಂಗ್ ಒಂದೆಡೆಯಾದರೆ ದೇವದತ್ ಪೆಡಿಕಲ್ ಆಟ ಎದುರಾಳಿ ಬೌಲರ್ ಧೈರ್ಯವನ್ನು ಅಡಗಿಸುವಂತಿತ್ತು. ಇನ್ನು ಎಂದಿನAತೆ ರನ್ ಮಷಿನ್ ವಿರಾಟ್ ಅನುಭವದ ಆಟ ಸನ್‌ರೈಸರ್ಸ್ಗೆ ಗೆಲುವಿನ ಯಾವ ಕಿಟಕಿಯ ತೆಗೆಯದಂತೆ ಮಾಡಿತು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!