ಬಾಗಲಕೋಟೆ : ಏಪ್ರಿಲ್ 9 ರಂದು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಬಾಗಲಕೋಟೆಯಲ್ಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿಕೆ ನೀಡಿದ್ದು, ಎರಡು ಕ್ಷೇತ್ರಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ ಆಗಿದೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ ಹೇಳಲಿ? ಜನರೇ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ಏನಿದೆ? ಬಿಜೆಪಿಯಲ್ಲಿ ಯಾವ ಲೀಡರ್ ಗಳಿದ್ದಾರೆ? ಬಿಜೆಪಿಯಲ್ಲಿ ಯಾವುದೇ ಲೀಡರ್ಗಳು ಇಲ್ಲ. ಬಿಜೆಪಿಯಲ್ಲಿ 20 ಬಾಗಲುಗಳಿದ್ದು 20 ಗ್ರೂಪ್ ಗಳಾಗಿ ವಿಂಗಡನೆ ಆಗಿದೆ.
ಆರ್ ಅಶೋಕ್ ಅವರದ್ದು ಒಂದು ಗ್ರೂಪ್ ಆದರೆ, ಬಿವೈ ವಿಜಯೇಂದ್ರ ಅವರದ್ದು ಮತ್ತೊಂದು ಗುಂಪು ಆಗಿದೆ. ಇನ್ನು ರಮೇಶ್ ಜಾರಕಿಹೊಳಿ ಅವರದು ಬೇರೆ ಗುಂಪುಗಳಾಗಿವೆ.
ಹೀಗಾಗಿ ಬಿಜೆಪಿಯಲ್ಲಿ 20 ಗುಂಪುಗಳಾಗಿವೆ. ಅಲ್ಲಿ ಏನು ಉಳಿದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು .ನಾವು ನುಡಿದಂತೆ ನಡೆದಿದ್ದೇವೆ.
5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ ಹೇಳಲಿ? ಜನರೇ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ಏನಿದೆ? ಬಿಜೆಪಿಯಲ್ಲಿ ಯಾವ ಲೀಡರ್ ಗಳಿದ್ದಾರೆ? ಬಿಜೆಪಿಯಲ್ಲಿ ಯಾವುದೇ ಲೀಡರ್ಗಳು ಇಲ್ಲ. ಬಿಜೆಪಿಯಲ್ಲಿ 20 ಬಾಗಲುಗಳಿದ್ದು 20 ಗ್ರೂಪ್ ಗಳಾಗಿ ವಿಂಗಡನೆ ಆಗಿದೆ.




