ಅಮೇರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿರುವ ಯುದ್ದ ಈಗ ಪ್ರಮುಖ ಹಂತ ತಲುಪಿದೆ. ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಇರಾನ್ ಪ್ರಮುಖ ಸ್ಥಳಗಳನ್ನು ನಾಶ ಪಡಿಸಲಾಗಿದೆ ಎಂದು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಹೇಳಿಕೊಂಡಿದ್ದಾರೆ.
ವೈಮಾನಿಕ ದಾಳಿ ಅಷ್ಟಾಗಿ ಪರಿಣಾಮ ಬೀರದ ಕಾರಣಕ್ಕೆ ಕೆಲವು ಸಮಯ ಸೀಮೆ ಹಾಗೂ ಇತಿ ಮಿತಿಗಳ ಮೂಲಕ ಇರಾನ್ ಮೇಲೆ ಭೂ ದಾಳಿಗೆ ಅಮೇರಿಕ ಯೋಜನೆ ಹಾಕಿಕೊಂಡಿದೆ.
ಏತನ್ಮಧ್ಯೆ ಮಾಹಿತಿಗಳ ಪ್ರಕಾರ ಇರಾನ್ ಮೇಲೆ ಸೇನಾ ಕಾರ್ಯಾಚರಣೆ, ರಾಜಕೀಯ, ಆರ್ಥಿಕ ಒತ್ತಡಗಳನ್ನು ಹೇರಲು ಕಾರ್ಯ ಯೋಜನೆ ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.
ಇರಾನ್ ಮೇಲೆ ರಾಜಕೀಯ, ಆರ್ಥಿಕ ಒತ್ತಡಕ್ಕೂ ಅಮೇರಿಕ ಯೋಜನೆ




