Ad imageAd image

ವೈ.ಎನ್.ಹೊಸಕೋಟೆ ಗ್ರಾಮಪಂಚಾಯಿತಿಯಲ್ಲಿ ರಾಷ್ಟ್ರಧ್ವಜದ ನಿಯಮ ಉಲ್ಲಂಘನೆ

Bharath Vaibhav
ವೈ.ಎನ್.ಹೊಸಕೋಟೆ ಗ್ರಾಮಪಂಚಾಯಿತಿಯಲ್ಲಿ ರಾಷ್ಟ್ರಧ್ವಜದ ನಿಯಮ ಉಲ್ಲಂಘನೆ
WhatsApp Group Join Now
Telegram Group Join Now

ಪಾವಗಡ : ತಾಲ್ಲೂಕಿನಲ್ಲಿ ಬರುವ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತು ಕರ್ನಾಟಕ ಸರ್ಕಾರವು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದೆ ಆದರೆ ವೈ.ಎನ್.ಹೊಸಕೋಟೆ ಗ್ರಾಮಪಂಚಾಯಿತಿಯಲ್ಲಿ ರಾಷ್ಟ್ರಧ್ವಜ ಎರಡು ದಿನಗಳು ಕಳೆದರು ಇಳಿಸದೆ ಹಾಗೆ ಇರುವುದು ಕಂಡುಬಂದಿದೆ ಶುಕ್ರವಾರ ಹಾಗೂ ಶನಿವಾರ ಎರಡು ದಿನ ರಾಷ್ಟ್ರ ಧ್ವಜದ ನಿಯಮ ಉಲ್ಲಂಘನೆಯಾಗುತ್ತಿರುವುದು ಸಿಬ್ಬಂದಿಗಳ ಬೇಜವಬ್ದಾರಿಗೆ ಕಾರಣವಾಗಿದೆ.

ಪ್ರತಿ ನಿತ್ಯ ರಾಷ್ಟ್ರಧ್ವಜಾರೋಹಣ ರಾಜ್ಯದ ಎಲ್ಲಾ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳ ಆವರಣದಲ್ಲಿ ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇನ್ನು ಪ್ರತಿ ದಿನ ರಾಷ್ಟ್ರಧ್ವಜ ಹಾರಿಸುವಾಗ ಭಾರತೀಯ ಧ್ವಜ ಸಂಹಿತೆ-2002ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಧ್ವಜವನ್ನು ಸೂರ್ಯೋದಯದ ನಂತರ ಹಾರಿಸಿ, ಸೂರ್ಯಾಸ್ತಮದ ಮೊದಲು ಗೌರವಯುತವಾಗಿ ಇಳಿಸಬೇಕು ಎಂಬುವುದು ಸರ್ಕಾರದ ನಿಯಮ ಆದರೆ ವೈ.ಎನ್.ಹೊಸಕೋಟೆ ಗ್ರಾಮಪಂಚಾಯಿತಿ ಸಿಬ್ಬಂದಿ ಮಾತ್ರ ಯಾವುದನ್ನು ಪಾಲಿಸದೆ ಬೇಕಾಬಿಟ್ಟಿ ರಾಷ್ಟಧ್ವಜ ಹಾರಿಸುತ್ತಾ ರಾಷ್ಟಧ್ವಜಕ್ಕೆ ಅವಮಾನಿಸಿದ್ದಾರೆ ಈ ಹಿಂದೆಯೂ ಕೂಡ ರಾತ್ರಿ ಸಮಯದಲ್ಲಿಯೂ ಕೂಡ ಧ್ವಜವನ್ನು ಇಳಿಸದೆ ಹಾಗೆಯೆ ಬಿಟ್ಟು ಹೊಗಿದ್ದರು ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಗ್ರಾಮಪಂಚಾಯಿತಿ ಸಿಬ್ಬಂದಿಗೆ ತರಾಟೆ ತೆದೆದುಕೊಂಡು ಮತ್ತೊಮ್ಮೆ ಈ ತರ ಪುನಾರವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದರು.

ಆದರೆ ಶುಕ್ರವಾರ ಮಧ್ಯ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಪೋಟೊ ತೆಗೆದು ಕಳುಹಿಸಿದ್ದು ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಏನಾಗಿದೆ ಎಂದು ಪರೀಶಿಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನಾದರು ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಸಿಬ್ಬಂದಿಯ ವಿರುದ್ದ ಕ್ರಮ ವಹಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದ ಹಾಗೆ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂಬುವುದು ಸಾರ್ವಜನಿಕರ‌ ಆಭಿಪ್ರಾಯವಾಗಿದೆ.

ವರದಿ : ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!