ಮೈಸೂರು: ಹೆತ್ತವರ ಪಾಲಿಗೆ ಆ ಮಗು ಮನೆಯ ಬೆಳಗುವ ದೀಪವಾಗಿತ್ತು. ಅಂಬೆಗಾಲಿಡುತ್ತಾ, ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗಿಡುತ್ತಾ ಮುಗ್ಧ ನಗು ಬೀರುತ್ತಿದ್ದ ಆ ಆರು ತಿಂಗಳ ಕಂದಮ್ಮನ ಮನೆಯಲ್ಲಿ ಇಂದು ಮೌನ ಆವರಿಸಿದೆ.
ವಿಧಿಯ ಆಟ ಎಷ್ಟು ಕ್ರೂರವೆಂದರೆ, ಒಂದು ಸಣ್ಣ ದಾಸವಾಳದ ಹೂವು ಒಂದು ತುಂಬು ಸಂಸಾರದ ಸಂತೋಷವನ್ನೇ ಕಸಿದುಕೊಂಡಿದೆ.
ಮೈಸೂರಿನಲ್ಲಿ ನಡೆದ ಈ ಘಟನೆ ಪ್ರತಿಯೊಬ್ಬ ಪೋಷಕರ ಎದೆಯನ್ನು ಝಲ್ಲೆನ್ನಿಸುವಂತಿದೆ. ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ಅಕಸ್ಮಾತ್ ಆಗಿ ನೆಲದಲ್ಲಿದ್ದ ಒಣಗಿದ ದಾಸವಾಳದ ಎಸಳನ್ನು ಬಾಯಿಗೆ ಹಾಕಿಕೊಂಡಿದೆ. ಆ ಪುಟ್ಟ ಎಸಳು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದೇ ಅನಾಹುತಕ್ಕೆ ಕಾರಣವಾಯಿತು.




