ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಂಬAಧಿಸಿದAತೆ ಪಾಕಿಸ್ತಾನ್ ಮಧ್ಯಸ್ಥಿಕೆಯಲ್ಲಿ ಯುದ್ದ ನಿಲ್ಲಿಸುವ ಸಂಬAಧ ನಡೆಯುತ್ತಿರುವ ಮಾತುಕತೆ ವಿಷಯ ಪಾಕಿಸ್ತಾನದ ವೈಯಕ್ತಿಕ ವಿಚಾರ. ನಾವು ಆ ಸಂದಾನ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಇರಾನ್ ಹೇಳಿದೆ.
ಇರಾನ್ ಈ ಮೂಲಕ ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ನಿರಾಕರಿಸಿದ್ದು, ಮೊದಲು ಯುದ್ದ ಆರಂಭಿಸಿದ್ದು, ನಾವಲ್ಲ ಎಂಬುದನ್ನು ಮನಗಾನಬೇಕು ಎಂದು ಇರಾನ್ ಹೇಳಿದೆ.
ಮುಂಬೈನಲ್ಲಿರುವ ಇರಾನ್‌ನ ಕಾನ್ಸೂಲೇಟ್ ಜನರಲ್ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಹೇಳಿಕೆಯನ್ನು ನೀಡಿದ್ದು, ಅಲ್ಲಿ ಅಮೇರಿಕದೊಂದಿಗೆ ಯಾವುದೇ ನೇರ ಮಾತುಕತೆಗಳು ನಡೆದಿಲ್ಲ. ಪಾಕಿಸ್ತಾನ್‌ದಲ್ಲಿ ಪಾಕಿಸ್ತಾನ್ ಮಧ್ಯಸ್ಥಿಕೆಯಲ್ಲಿ ನಡೆದಿರುವ ಮಾತುಕತೆಗಳು ಪಾಕ್‌ನ ಸ್ವಂತ ನಿಲುವು ಇರಾನ್ (ನಾವು) ಆ ತರಹದ ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪಾಕಿಸ್ತಾನ್ ಮಧ್ಯಸ್ಥಿಕೆ: ಇರಾನ್ ನಿರಾಕರಣೆ




