ಕೊಕಟನೂರ :ಗ್ರಾಮ ಪಂಚಾಯತನಲ್ಲಿ ಮಹಾವೀರ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಜೈನ ಸಮುದಾಯದ ಮುಖಂಡರು, ಗ್ರಾಮ ಪಂಚಾಯತ ಸಿಬಂದಿ ಹಾಗೂ ಗ್ರಾಮದ ಗಣ್ಯರು ಒಟ್ಟಾಗಿ ಭಾಗವಹಿಸಿ ಯಶಸ್ವಿಯಾಗಿ ನೆರವೇರಿಸಿದರು. ಬೆಳಿಗ್ಗೆ ವಿಶೇಷ ಪೂಜೆಗಳೊಂದಿಗೆ ಕಾರ್ಯಕ್ರಮ ಆರಂಭವಾಗಿ, ಬಳಿಕ ಬೀದಿ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಮಹಾವೀರ ಸ್ವಾಮಿಗಳ ಚಿತ್ರವನ್ನು ಅಲಂಕರಿಸಿದ ರಥವನ್ನು ಕರೆದುಕೊಂಡು ಹೋಗಲಾಯಿತು. ಮಹಿಳೆಯರು ಪರಂಪರೆಯ ಕುಂಭ ಹೊತ್ತು ಭಾಗವಹಿಸಿ ಹಬ್ಬದ ಶೋಭೆಯನ್ನು ಹೆಚ್ಚಿಸಿದರು. ಭಕ್ತರು ಜಯಘೋಷಗಳನ್ನು ಕೂಗಿ, ಶಾಂತಿ, ಅಹಿಂಸೆ ಮತ್ತು ಸತ್ಯದ ಸಂದೇಶವನ್ನು ಸಾರಿದರು.

ಗ್ರಾಮದ ಎಲ್ಲ ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಮುದಾಯದ ಐಕ್ಯತೆಯನ್ನು ತೋರಿಸಿದರು. ಮಹಾವೀರ ಜಯಂತಿ ಆಚರಣೆ ಮೂಲಕ ಶಾಂತಿ ಮತ್ತು ಸೌಹಾರ್ದತೆಯ ಮಹತ್ವವನ್ನು ಎಲ್ಲರಿಗೂ ತಿಳಿಸುವ ಪ್ರಯತ್ನವೂ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ತೀರತಪ್ಪ ವೀರಗೌಡ. ಕುಮಾರ ವೀರಗೌಡ ಬಾಬು ರೊಡ್ಡ ರಾಜು ರೊಡ್ಡ ಶೀತಲ್ ವೀರಗೌಡ ಅಣ್ಣಪ್ಪ ಪಡನೂರು ಬಾಹುಬಲಿ ವೀರಗೌಡ ಹಾಗೂ ಅನೇಕ ಜೈನ ಸಮಾಜದ ಗುರು ಹಿರಿಯರು ಗ್ರಾಮದ ಮುಖಂಡರು ಭಾಗವಹಿಸಿದರು.
ವರದಿ :ಅಜಯ ಕಾಂಬಳೆ




