Ad imageAd image

ಗೃಹಸಚಿವರೇ ನೆಟ್ಟಗಿಲ್ಲ ಎಂದು ಪೋಸ್ಟ್ : ದಾಖಲಾಯ್ತು ಕೇಸ್

Bharath Vaibhav
ಗೃಹಸಚಿವರೇ ನೆಟ್ಟಗಿಲ್ಲ ಎಂದು ಪೋಸ್ಟ್ : ದಾಖಲಾಯ್ತು ಕೇಸ್
WhatsApp Group Join Now
Telegram Group Join Now

ಬೆಂಗಳೂರು: ಗೃಹಸಚಿವರೇ ನೆಟ್ಟಗಿಲ್ಲ, ಅವರ ಕಾಲೇಜಿನ ಪ್ರೊಫೆಸರ್ ನೆಟ್ಟಗಿರ್ತಾನಾ? ಎಂದು ಎಕ್ಸ್​​​​​ ಖಾತೆ ಮೂಲಕ ಗೃಹ ಸಚಿವ ಡಾ. ಜಿ. ಪರಮೆಶ್ವರ್​​ಕುರಿತು ಆಕ್ಷೇಪಾರ್ಹ ಪೋಸ್ಟ್​​​ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.

ಹಿಂದೂ ಜಾಗೃತನಾಗು ಎಂಬ ಎಕ್ಸ್ ಖಾತೆಯಲ್ಲಿ ಈ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದ್ದು, ಉದ್ದೇಶಪೂರ್ವಕ ದ್ವೇಷ ಭಾವನೆ ಮೂಡಿಸುವ ಆರೋಪ ಸಂಬಂಧ ಐಟಿ ಆ್ಯಕ್ಟ್ ಹಾಗೂ BNS U/S 299ರಡಿ ಪ್ರಕರಣ ದಾಖಲಾಗಿದೆ. ಹಿಂಮದೂ ಮತ್ತು ಮುಸ್ಲಿಂ ಧರ್ಮದವರ ಭಾವನೆಗಳಿಗೆ ನಿಂದನೆ ಆರೋಪವೂ ಕೇಳಿಬಂದಿದೆ.

ಗೃಹಮಂತ್ರಿಗಳೇ ನೆಟ್ಟಗಿಲ್ಲ, ಇನ್ನು ಅವರ ಕಾಲೇಜಿನ ಪ್ರೊಪೆಸರ್ ನೆಟ್ಟಗೆ ಇರ್ತಾನಾ? ಎಂಬ ಶೀರ್ಷಿಕೆ ಸಮೇತ ಹಿಂದೂ ಜಾಗೃತನಾಗು ಎಂಬ ಎಕ್ಸ್​​ ಖಾತೆಯಲ್ಲಿ ವಿಡಿಯೋ ಸಮೇತ ಪೋಸ್ಟ್​​ ಒಂದನ್ನು ಮಾಡಲಾಗಿದೆ.

ಮೆಡಿಕಲ್​​ ಕಾಲೇಜಿನ ಹಿಂದೂ ಯುವತಿಗೆ ಪ್ರೇಮ ನಿವೇದನೆ​​ ಮಾಡಿದ ಅಬ್ದುಲ್ಲಾನಿಗೆ ಬಿತ್ತು ಚಪ್ಪಲಿ ಏಟು. ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು ಎಂಬ ಬರಹವೂ ಈ ಪೋಸ್ಟ್​​ನಲ್ಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!