ಅಧಿಕಾರಿಗಳ ಕಣ್ಣೆದುರೇ ನದಿಗೆ ಕನ್ನ: ಪಿನಾಕಿನಿ ಮರಳು ಲೂಟಿ ಮಾಡುತ್ತಿರುವ ‘ಮಹೇಂದ್ರ’ ಮೃಗಗಳು!
ಪಾವಗಡ : ಶಾಂತಿ ಪ್ರಿಯ ಪಾವಗಡ ತಾಲೂಕಿನಲ್ಲಿ ಈಗ ಮರಳು ಮಾಫಿಯಾದ್ದೇ ಕಾರುಬಾರು.
ಕತ್ತಲಾಗುತ್ತಿದ್ದಂತೆ ಶುರುವಾಗುವ ಈ ಮರಳು ದಂದೆ, ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವವರೆಗೂ ಅವ್ಯಾಹತವಾಗಿ ಸಾಗುತ್ತಿದೆ. ಉತ್ತರ ಪಿನಾಕಿನಿ ನದಿಯ ಒಡಲನ್ನು ಬಗೆಯುತ್ತಿರುವ ಕಿರಾತಕರು, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಸುಣ್ಣ ಬಳಿಯುತ್ತಿದ್ದಾರೆ.
ಇಂದು ಮುಂಜಾನೆ 5:30ರ ಸುಮಾರಿಗೆ ಪಳವಳ್ಳಿ ರಸ್ತೆಯ ತಿಮ್ಮಾಪುರ ಗ್ರಾಮದಿಂದ ಪಾವಗಡ ಪಟ್ಟಣಕ್ಕೆ ಅಗ್ನಿಶಾಮಕ ದಳದ ಕಚೇರಿ ಮಾರ್ಗವಾಗಿ ಅಕ್ರಮ ಮರಳು ಹೊತ್ತ ಮಹೇಂದ್ರ ಟ್ರ್ಯಾಕ್ಟರ್ (ಸಂಖ್ಯೆ: KA 06 TC 8547) ರಾಜಾರೋಷವಾಗಿ ನುಗ್ಗಿದೆ.
ಡ್ರೈವರ್ ಅತಿರೇಕ: ಒಂದು ಕೈಯಲ್ಲಿ ಸ್ಟೀರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್! ಸಾರ್ವಜನಿಕರ ಪ್ರಾಣದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ಮೊಬೈಲ್ನಲ್ಲಿ ಮಾತನಾಡುತ್ತಲೇ ಮರಳು ಸಾಗಿಸುತ್ತಿದ್ದ ದೃಶ್ಯ ಮೈ ನಡುಗಿಸುವಂತಿತ್ತು.

ಅಧಿಕಾರಿಗಳೇ, ಇದು ನಿಮ್ಮ ‘ಕುಂಭಕರ್ಣ’ ನಿದ್ದೆಯೇ ಅಥವಾ ಕುಮ್ಮಕ್ಕೇ?
ಪಾವಗಡ ಪಟ್ಟಣದಲ್ಲಿ ಇರುವ ನಗರ ಪೊಲೀಸ್ ಠಾಣೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಹಾಗೂ ಭೂ ವಿಜ್ಞಾನ ಇಲಾಖೆಯ. ಮತ್ತು ಆರ್ ಟಿ ಓ ಇಲಾಖೆಯ ಅಧಿಕಾರಿಗಳಿಗೆ ಈ ದಂದೆಯ ಸಂಪೂರ್ಣ ಮಾಹಿತಿ ಇದ್ದರೂ, ‘ನೋಡದವರಂತೆ’ ಮೌನಕ್ಕೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
”ನದಿಯ ಮರಳು ಲೂಟಿಯಾಗುತ್ತಿದ್ದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಯಾಕೆ?
ಪ್ರತಿ ಟ್ರ್ಯಾಕ್ಟರ್ಗೆ ಇಂತಿಷ್ಟು ಅಂತ ಫಿಕ್ಸ್ ಆಗಿದೆಯೇ?” – ಇದು ಸಾರ್ವಜನಿಕರ ನೇರ ಪ್ರಶ್ನೆ.
ಇಷ್ಟೆಲ್ಲಾ ಸಾಕ್ಷ್ಯಧಾರಗಳು ಕಣ್ಣಮುಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಬೀದಿಗಿಳಿಯುವುದು ಖಚಿತ.ವಾಹನ ಸಂಖ್ಯೆ KA 06 TC 8547 ಮಾಲೀಕ ಹಾಗೂ ಚಾಲಕನ ವಿರುದ್ಧ ಕೂಡಲೇ FIR ದಾಖಲಾಗಲಿ.
ಅಕ್ರಮ ಸಾಗಾಣಿಕೆಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ತನಿಖೆ ನಡೆಸಲಿ.
ವರದಿ: ಶಿವಾನಂದ




