Ad imageAd image

ಸೆಡ್ಡಿನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮಾಲಿಕ ಸೇರಿ 45 ಕುರಿ ಮೇಕೆಗಳು ಸಜೀವ ದಹನ

Bharath Vaibhav
ಸೆಡ್ಡಿನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮಾಲಿಕ ಸೇರಿ 45 ಕುರಿ ಮೇಕೆಗಳು ಸಜೀವ ದಹನ
WhatsApp Group Join Now
Telegram Group Join Now

ಔರಾದ : ತಾಲ್ಲೂಕಿನ ಬೊರಳ ಗ್ರಾಮದ ಜಮಿನಿನಲ್ಲಿ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡದಿಂದ ಕುರಿ ಮೇಕೆ ಸೆಡ್ಡಿಗೆ ಬೆಂಕಿ ಹತ್ತಿ ಸೆಡ್ಡಿನಲ್ಲಿದ್ದ 40ಕ್ಕು ಹೆಚ್ಚು ಕುರಿ ಮೇಕೆ ಆಡುಗಳು ಹಾಗೂ ಮಾಲಿಕ ಶಂಕರ್ ಮೇತ್ರೆ (ವ 62) ಸಜೀವ ದಹನ.

ನಿತ್ಯ ಕಾಯಕ ದೊಂದಿಗೆ ಕುರಿಗಳನ್ನು ಮೇಯಿಸಿಕೊಂಡು ಬಂದು ರೂಢಿ ಯಂತೆ ಕುರಿ ಮೇಕೆಗಳನ್ನು ಕುರಿ ಸೆಡ್ಡಿನಲ್ಲಿ ಸಂಜೆ ಏಳು ಗಂಟೆಗೆ ಸುಮಾರಿಗೆ ಹಾಕಿ ತಾನು ಸಹ ಒಳಗಡೆ ಮಲಗಿಕೊಂಡಿದ್ದರು ಅದೇ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಕಾಣಿಸಿಕೊಂಡು ಏಕಾಏಕಿ ಬೆಂಕಿ ಹರಡಿ ಇಡೀ ಶೆಡ್ಡಿಗೆ ಬೆಂಕಿ ಆವರಿಸಿತ್ತು ಈ ಸಂದರ್ಭದಲ್ಲಿ ಕುರಿ ಮಾಲಿಕ ಶಂಕರ್ ಮೇತ್ರೆ ತನ್ನ ಪ್ರಾಣದ ಹಂಗು ತೊರೆದು ದಿಗ್ ಭ್ರಮೆಗೊಂಡು ಒಳಗಿದ್ದ ಕುರಿ ಮೇಕೆಗಳನ್ನು ರಕ್ಷಿಸಲು ಹೋಗಿ ಕುರಿ ಮೇಕೆಗಳ ಸಹಿತ ಮಾಲಿಕ ಪ್ರಾಣ ಬೆಂಕಿಯಲ್ಲಿ ಕಳೆದು ಕೊಂಡಿರುವ ಘಟನೆ ಬೋರಳ ಗ್ರಾಮದಲ್ಲಿ ನಡೆದಿದೆ.

ಈ ಸಂದರ್ಭದಲ್ಲಿ,45 ಕ್ವಿಂಟಲ್ ಕುಸಬಿ,1 ಕ್ವಿಂಟಲ್ ಗೋಧಿ,4 ಕ್ವಿಂಟಲ್ ಜೋಳ, 1 ದ್ವಿಚಕ್ರ ವಾಹನ ಸೇರಿ ಸುಮಾರು 15 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ ಹಾನಿ ಯಾಗಿದೆ ಎಂದು ಔರಾದ ಅಗ್ನಿಶಾಮಕ ಠಾಣೆ ಇಂದ ತಿಳಿದುಬಂದಿದೆ. ಮತ್ತು ಎರಡು ಲಕ್ಷ ಮೌಲ್ಯದ ಆಸ್ತಿಯನ್ನು ರಕ್ಷಿಸುವಲ್ಲಿ ಔರಾದ ಅಗ್ನಿಶಾಮಕ ಠಾಣೆಯ ಪೊಲೀಸರು ಸಫಲರಾಗಿದ್ದಾರೆ ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ.

ವರದಿ : ಸೂರ್ಯಕಾಂತ್ ಎಕಲಾರ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!