Ad imageAd image

ರಾಜ್ಯ ಕರಾಟೆ ಶಿಕ್ಷಕರ ಸಂಘ: ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಭಾಷ್ ಮುತ್ಕೂರ್ ಆಯ್ಕೆ

Bharath Vaibhav
ರಾಜ್ಯ ಕರಾಟೆ ಶಿಕ್ಷಕರ ಸಂಘ: ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಭಾಷ್ ಮುತ್ಕೂರ್ ಆಯ್ಕೆ
WhatsApp Group Join Now
Telegram Group Join Now

ಹಗರಿಬೊಮ್ಮನಹಳ್ಳಿ : ಇತ್ತೀಚೆಗೆ ಉಡುಪಿಯ ದುರ್ಗಾ ಇಂಟರನ್ಯಾಷನಲ್ ಹೋಟೇಲ್‌ನಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ಮಹಾಸಭೆ ಭರದಿಂದ ನಡೆಯಿತು. ಸಂಘದ ನಿಯಮಾವಳಿಗಳ ಪ್ರಕಾರ ನಡೆದ ಚುನಾವಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕರಾಟೆ ಶಿಕ್ಷಕರು ಹಾಗೂ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದರು. ಈ ಮಹಾಸಭೆಯಲ್ಲಿ ಸಂಘದ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಪ್ರಮುಖ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತು. ವಿಜಯನಗರ ಜಿಲ್ಲೆಯಿಂದ ಕರಾಟೆ ಮಾಸ್ಟರ್‌ ಶಿಹಾನ್ ಸುಭಾಷ್ ಮುತ್ಕೂರ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂದರ್ಭದಲ್ಲಿ ಮಂಗಳೂರಿನ ಮಹಮ್ಮದ್ ನದೀಮ್ ಅವರನ್ನು ಸಂಘದ ಅಧ್ಯಕ್ಷರಾಗಿ ಹಾಗೂ ಬಳ್ಳಾರಿ ಜಿಲ್ಲೆಯ ಕಟ್ಟೇಸ್ವಾಮಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ರಾಜ್ಯದ ಕರಾಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು, ತರಬೇತಿ ಗುಣಮಟ್ಟವನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು ಹಾಗೂ ರಾಜ್ಯ ಮಟ್ಟದ ಕ್ರೀಡಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಕರಾಟೆ ಮಾಸ್ಟರ್‌ಗಳಾದ ಡಾ. ದಾಸರ ನಾಗರಾಜ, ಹನುಮಂತ, ಆನಂದ, ಕೊಂಡಯ್ಯ ಸೇರಿದಂತೆ ಸಂಘದ ಹಿರಿಯರು ಹಾಗೂ ಸದಸ್ಯರು ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ಅವರ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.

ವರದಿ : ಎಂ ಮಂಜುನಾಥ್ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!