ನಿಪ್ಪಾಣಿ : ನಗರದ ಸ್ಥಾಪಿಸಲಾಗಿರುವ ಶ್ರೀ ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬುಧವಾರದಂದು ಹನುಮಾನ ದೇವರ ಬೆಳ್ಳಿ ಮೂರ್ತಿಯನ್ನು ನಿಪ್ಪಾಣಿ ನಗರದ ಪ್ರಮುಖ ರಸ್ತೆಗಳಾದ ಶಿವಾಜಿ ಚೌಕ್, ಶ್ರೀಮಂತ ನಿಪ್ಪಾಣಕರ ರಾಜವಾಡಾ , ಕೋಟಿವಾಲೆ ಕಾರ್ನರ್, ಮಹಾತ್ಮಾಗಾಂಧಿ ಚೌಕ್, ತೇಲಿ ಗಲ್ಲಿ, ಭಾಟಗಲ್ಲಿಯ ಮೂಲಕ ಮೆರವಣಿಗೆ ಮೂಲಕ ಬ್ಯಾಂಡ್ ಬ್ಯಾಂಜೋ, ಡೊಳ್ಳು, ಕೋಲು, ಬಾರಿಸುತ್ತಾ ಪಾಲಕಿಯನ್ನು ಮಂದಿರ ಕಡೆ ಮೆರವಣಿಗೆ ಮೂಲಕ ಬಾರಿಸುತ್ತ ಮಂದಿರಕ್ಕೆ ಬಂದು 5 ಸುತ್ತು ಪ್ರದಕ್ಷಣೆ ಹಾಕಲಾಯಿತು. ಮರುದಿನ ಮುಂಜಾನೆ ನಿಪ್ಪಾಣಿ ಸಂಸ್ಥೆಯ ರಾಜೇಸಾಹೇಬ ಶ್ರೀಮಂತ ದಾದಾರಾಜೆ ನಿಪ್ಪಾಣಕರ ಸರ್ಕಾರ ಅವರ ಶುಭ ಹಸ್ತೆಯಿಂದ ವಿಧಿ ವಿಧಾನ ಪ್ರಕಾರ ಅಭಿಷೇಕ್, ಪೂಜೆ ಸಲ್ಲಿಸಿದರು, ನಂತರ ಮಹಾಆರತಿ ಮಾಡಲಾಯಿತು ಮಧ್ಯಾಹ್ನ ವೇಳೆಗೆ ಮಹಾಪ್ರಸಾದ ಆಯೋಜಿಸಲಾಗಿತ್ತು ಈ ಸಂಧರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮ ಶ್ರೀಮಂತ ಯುವರಾಜ ಸಿದ್ಧೋಜಿರಾಜೆ ನಿಪ್ಪಾಣಕರ ಸರ್ಕಾರ ,ದೇವದಾಸ್ ಕಾಗಲಕರ್, ರಾಜು ಜೆಡಿ ,ಸುಭಾಷ್, ಅಭಿಜೀತ್ ದುಮಾಳ, ಪಾಳನೆ ಮಹಾದೇವ, ಸುನೀಲ್ ಪ್ರವೀಣ್ ಮಾಳ್ವೆ ,ಮಹಾದೇವ ಲೋಹಾರ್ , ಸುರೇಶ ಮುಂಡೆ, ಸುಬಾಶ ಭಗತ್ ,ಅಭಿಜಿತ್, ಅಮೋಲ್ ಭೋಸಲೆ,ಕಿರಣ್ ಪಾಟೀಲ್ ,ಮಹಾದೇವ ಭೋಯಿ, ಬಾಳು ಪವಾರ್, ಧೈರ್ಯಶೀಲ ಭಗತ್ ಸೇರಿದಂತೆ ಮಂಡಳಿ ಸದಸ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




