ಯುಎಸ್- ಇಸ್ರೇಲ್- ಇರಾನ್ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬದಲಾಗಿ ಪಶ್ಚಿಮ ಏಷ್ಯಾ ಬಿಕ್ಕಟ್ಟು ಉಲ್ಬಣಗೊಳ್ಳುವ ಕಾರ್ಮೋಡಗಳೇ ಹೆಚ್ಚುತ್ತಿವೆ.
ಒಂದೆಡೆ ಯುದ್ದ ನಿಲ್ಲಿಸುವ ಸಂಧಾನಗಳು, ಪ್ರಯತ್ನಗಳು, ಅಮೇರಿಕದಲ್ಲಿನ ಆಂತರಿಕ ಒತ್ತಡಗಳೇ ಇದ್ದರೂ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಅವರು ಮಾತ್ರ ಇರಾನ್‌ಗೆ ಹೊಸ ಬೆದರಿಕೆಗಳನ್ನು ಹಾಕಿದ್ದಾರೆ.
ಇರಾನ್ ಯುದ್ದ ನಿಲ್ಲಿಸುವ ಷರತ್ತುಗಳಿಗೆ ಒಪ್ಪದಿದ್ದರೆ ಸೇತುವೆಗಳು, ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಇರಾನ್‌ಗೆ ಹೊಸದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಇದರೊಂದಿಗೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳನ್ನು ತೋರುತ್ತಿದೆ ಎಂದು ವರದಿ ಹೇಳಿದೆ.
ಇರಾನ್ ಸೇತುವೆ, ವಿದ್ಯುತ್ ಸ್ಥಾವರಗಳ ಮೇಲೆ ದಾಳಿ: ಟ್ರಂಫ್ ಹೊಸ ಬೆದರಿಕೆ




