ಶೀಘ್ರದಲ್ಲಿಯೇ ಗುಜರಾತ ನಲ್ಲಿ 2 ಶಾಖಾರಂಭ.
ನಿಪ್ಪಾಣಿ: ಪಾರದರ್ಶಕ ಆಡಳಿತ, ಬ್ಯಾಂಕಿನ ಸದಸ್ಯರ, ಗ್ರಾಹಕರ, ಠೇವುದಾರರ ಹಾಗೂ ಸಾಲಗಾರ ಸದಸ್ಯರ, ಅತ್ಯಮೂಲ್ಯ ಸಹಕಾರ್ಯ ಹಾಗೂ ವಿಶ್ವಾಸದಿಂದ ಬ್ಯಾಂಕಿನ ಮಾರ್ಚ್ 2026ರ ವರೆಗಿನ ಆರ್ಥಿಕ ವರ್ಷದಲ್ಲಿ ನೆರೆಯ ಮಹಾರಾಷ್ಟ್ರದ ಈಚಲಕರಂಜಿಯ ಕಲ್ಲಪ್ಪಣ್ಣ ಅವಾಡೆ ಈಚಲಕರಂಜಿ ಜನತಾ ಬ್ಯಾಂಕಿಗೆ ದಾಖಲೆ 50 ಕೋಟಿ 25 ಲಕ್ಷ ರೂಪಾಯಿಗಳ ಲಾಭ ಬಂದಿದ್ದು ಬ್ಯಾಂಕಿನ ಇತಿಹಾಸದಲ್ಲಿ ದಾಖಲೆ 4,869 ಕೋಟಿ ರೂಪಾಯಿಗಳ ವಾರ್ಷಿಕ ವ್ಯವಹಾರ ನಡೆಸಿ ಮೂರು ರಾಜ್ಯಗಳಲ್ಲಿ ಆರ್ಥಿಕ ಸಮೃದ್ಧಿಯಲ್ಲಿ ಮುಂಚೂಣಿಯಲ್ಲಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಸಪ್ನಿಲ್ ಅವಾಡೆ ತಿಳಿಸಿದರು. ಈಚಲಕರಂಜಿಯಂತ ಬ್ಯಾಂಕ್ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಳೆದ ಆರು ದಶಕಗಳ ಇತಿಹಾಸದಲ್ಲಿ ಸಂಸ್ಥಾಪಕ ಅಧ್ಯಕ್ಷ ಕಲ್ಲಪ್ಪನ್ನಾ ಅವಾಡೆಯವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರ ಕರ್ನಾಟಕ ರಾಜ್ಯಗಳಲ್ಲಿ ತನ್ನ 55 ಶಾಖೆಗಳ ಮೂಲಕ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರು ಸುದ್ದಿಗೋಷ್ಠಿಗೆ ಪ್ರಾರಂಭದಲ್ಲಿ ಪತ್ರಕರ್ತರ ಸಮಸ್ಯೆ ಹಾಗೂ ಪ್ರಶ್ನೆಗಳಿಗೆ ಬ್ಯಾಂಕಿನ ಅಧ್ಯಕ್ಷರು ಸಮರ್ಪಕ ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಕಾರ್ಯಕಾರಿ ಅಧಿಕಾರಿ ಸಂಜಯ ಶಿರಗಾವಿ, ಉಪಾಧ್ಯಕ್ಷ ಸಂಜಯ ಅನಿಗೋಳ ಕಿರಣ್ ಪಾಟೀಲ, ಸಂಚಾಲಕರಾದ ಚಂದ್ರಕಾಂತ ಚೌಗಲೆ, ಮಹೇಶ ಸಾತಪುತೆ, ಬಂಡೋಪಂತ ಲಾಡ್ ರಮೇಶ ಪಾಟೀಲ, ಶೈಲೇಶ್ ಗೋರೆ,ಸುಭಾಷ್ ಜಾಧವ್ , ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




