ಮೊಳಕಾಲ್ಮೂರು : ಕರ್ನಾಟಕದಲ್ಲಿ ಕೆಲವು ವರ್ಷಗಳ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಮಾಡಿದ್ದ ಅಭಿವೃದ್ಧಿ, ಕೆಲಸಗಳನ್ನೇ ಮುಂದಿಟ್ಟು ಬೂತ್ ಮಟ್ಟದಿಂದ ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸುವುದೇ ನಮ್ಮ ಮುಖ್ಯ ಹಜಂಡ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾದ ಕೆ ಮಂಜುನಾಥ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರ ತಾಲೂಕಿನಾದ್ಯಂತ ಜೆಡಿಎಸ್ ಕಾರ್ಯಕರ್ತರನ್ನು ಬೂತ್ ಮಟ್ಟದಿಂದ ಒಗ್ಗೂಡಿಸುವ ಕುರಿತಾಗಿ ಅವರು ಪಟ್ಟಣಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಕಳೆದ ಕೆಲವು ವರ್ಷಗಳ ಹಿಂದೆ ಈ ಭಾಗದಲ್ಲಿ 50,000 ಜೆಡಿಎಸ್ ಕಾರ್ಯಕರ್ತರು ಇದ್ದರು, ಆದರೆ ಕೆಲ ಮುಖಂಡರುಗಳ ಕಾರಣದಿಂದ ಇಲ್ಲಿ ನೆಲಕಚ್ಚಿದೆ, ಆದರೆ ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಳಮಟ್ಟದಿಂದ ಭದ್ರ ಪಡಿಸಲು ಯೋಜನೆ ರೂಪಿಸುತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ ರೈತರಿಗೋಸ್ಕರ ಅನೇಕ ಯೋಜನೆಗಳನ್ನು ತಂದಿರುವ ಪಕ್ಷ ಎಂದರೆ ಜೆಡಿಎಸ್, ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿತ್ತು ಬೇರೆ ಯಾವ ಪಕ್ಷ ಕೂಡ ರೈತರ ಸಾಲ ಮನ್ನಾ ಮಾಡಿಲ್ಲ,ಕಳೆದ ಕೆಲವು ವರ್ಷಗಳಿಂದ ಸಂಘಟನೆ ಸೊರಗಿ ಹೋಗಿದೆ, ಕಳೆದ ಬಾರಿ ಅಧ್ಯಕ್ಷರಿದ್ದಾಗ ಈ ಭಾಗಕ್ಕೆ ಪ್ರಾಮುಖ್ಯತೆ ಕೊಡಲಿಲ್ಲ, ಆದಕಾರಣ ನೂತನ ಜಿಲ್ಲಾಧ್ಯಕ್ಷರಾಗುವ ವರೆಗೂ ನಾವು ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದೆ ಅದೇ ರೀತಿ ಈಗ ನೂತನವಾಗಿ ಜಿಲ್ಲಾಧ್ಯಕ್ಷರಾಗಿದ್ದಾರೆ, ನಮ್ಮ ಪಕ್ಷದಲ್ಲಿ ಕೆಲ ಮುಖಂಡರ ಭಿನ್ನ ಅಭಿಪ್ರಾಯದಿಂದ ಸೊರಗಿತ್ತು ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಕಟ್ಟುತ್ತೇವೆ ಎಂದರು ಸುಮಾರು 50 ಸಾವಿರ ವೋಟುಗಳಿದ್ರು ಅವು ನಿಷ್ಕ್ರಿಯಗೊಂಡಿವೆ ಮುಂದಿನ ದಿನಗಳಲ್ಲಿ ನಾವು ಇದನ್ನು ಬಲಪಡಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸಿದ್ದಲಿಂಗ ಮೂರ್ತಿ ಮಾತನಾಡಿ ನಾವು ಸುಮಾರು ವರ್ಷಗಳಿಂದ ನಿಷ್ಠಾವಂತರಾಗಿ ಕೆಲಸ ಮಾಡುತ್ತಿದ್ದೇವೆ, ಜಿಲ್ಲಾಧ್ಯಕ್ಷರಲ್ಲಿ ಮನವಿ ಪಕ್ಷವನ್ನು ಭದ್ರ ತಳಮಟ್ಟದಿಂದ ಕಟ್ಟಬೇಕು ಕೆಲ ಜೆಡಿಎಸ್ ನಾಯಕರನ್ನು ಈ ಕೂಡಲೇ ವಜಾ ಮಾಡಬೇಕು ಎಂದರು ನಮ್ಮಂತ ನಿಷ್ಠಾವಂತ ಸಾವಿರಾರು ಕಾರ್ಯಕರ್ತರು ಇದ್ದಾರೆ ಅವರನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದರು.
ಅದೇ ರೀತಿ ಮುಖಂಡರಾದ ನಾಗರಾಜ್, ನಾಗೇಂದ್ರಪ್ಪ ಜೆಡಿಎಸ್ ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂಬ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ ಮಂಜುನಾಥ್, ರಾಜ ಕಾರ್ಯದರ್ಶಿ ವೆಂಕಟೇಶ್, ಧನಂಜಯ, ಕೆ ಡಿ ಕೋಟೆ ನಾಗರಾಜ್, ಅಂಜಿನಪ್ಪ, ರಾಂಪುರ ಕುಮಾರಣ್ಣ, ಮಲ್ಲಹಳ್ಳಿ ದೇವೇಂದ್ರಪ್ಪ, ನಾಗೇಂದ್ರಪ್ಪ,ರಮೇಶ್, ಹನುಮಂತಪ್ಪ, ಧನಂಜಯ ಮುತ್ತಿಗರ್ ಹಳ್ಳಿ ಮಂಜಣ್ಣ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




