Ad imageAd image

ನಾಳೆ ರಾಮನವಮಿ, ಹನುಮ ಜಯಂತಿ ಮಹೋತ್ಸವ

Bharath Vaibhav
ನಾಳೆ ರಾಮನವಮಿ, ಹನುಮ ಜಯಂತಿ ಮಹೋತ್ಸವ
WhatsApp Group Join Now
Telegram Group Join Now

ಹುಬ್ಬಳ್ಳಿ : ಆನಂದ ನಗರದಲ್ಲಿರುವ ‘ಶ್ರೀ ರಾಮ ಉತ್ಸವ ಸಮಿತಿ ಚಾರಿಟಬಲ್ ಟ್ರಸ್ಟ್(ರಿ.)’ ವತಿಯಿಂದ ೧೨ನೇ ವರ್ಷದ ರಾಮ ನವಮಿ ಹಾಗೂ ಹನುಮ ಜಯಂತಿ ಮಹೋತ್ಸವವನ್ನು ಏ.೫ರಂದು ಮಧ್ಯಾಹ್ನ ೩ ಗಂಟೆಗೆ ಇಲ್ಲಿನ ಆನಂದನಗರದ ಲಾಸ್ಟ್ ಬಸ್‌ಸ್ಟಾಪ್ ನೀರಿನ ಟ್ಯಾಂಕ್ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸಂಜೀವಗೌಡ ಮಾಳಗಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವೈಭವದಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಶ್ರೀ ರಾಮಚಂದ್ರ ಹಾಗೂ ಹನುಮಂತನ ಮೂರ್ತಿಗೆ ಪುಷ್ಪಾರ್ಚನೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಮಹೇಶ ಟಂಗಿನಕಾಯಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ ಸಿ. ಮಾಳಗಿ, ಕುಮಾರ ಹಕಾರಿ ಇತರರಿದ್ದರು.

ವರದಿ : ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!