
ಘಾಜಿಬಾದ್: ಪ್ರೇಕ್ಷಕರ ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ಖ್ಯಾತ ನಟಿ ಹಾಗೂ ಗಾಯಕಿ ಸುನಂದಾ ಶರ್ಮಾ ಅವರು ತಮ್ಮ ಜನಪ್ರೀಯ ಹಾಡುಗಳು ಹಾಗೂ ಡ್ಯಾನ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿ ಕಾರ್ಯಕ್ರಮ ರದ್ದು ಪಡಿಸಿದ ಘಟನೆ ಇಲ್ಲಿ ನಡೆದಿದೆ.
‘ಜಾತ್ ಯಮ್ಲಾ, ‘ಜಾನಿ ತೇರಾ ನಾ’ ‘ಪಾಗಲ್ ನಹೀ ಹೋನಾ’ ಹಾಗೂ ‘ಚೋರಿ ಚೋರಿ’ ಮುಂತಾದ ಹಾಡುಗಳ ಮೂಲಕ ಇಲ್ಲಿನ ರಾಜಕುಮಾರ ಗೋಯಲ್ ಇನಸ್ಟಿಟ್ಯೂಟ್ ಆಫ್ ಸಂಸ್ಥೆಯಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿದ್ದರು ಸುನಂದಾ ಶರ್ಮಾ.
ಸುನಂದಾ ಶರ್ಮಾ ಹಾಡುಗಳ ಮೋಡಿಗೆ ಮರಳಾದ ಪ್ರೇಕ್ಷಕರು ತಮ್ಮ ವರ್ತನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ವೇದಿಕೆಗೆ ಧುಮುಕಿ ಸುನಂದಾ ಶರ್ಮಾ ಅವರನ್ನು ಮುಟ್ಟಲು ಯತ್ನಿಸಿದರು. ತಕ್ಷಣ ಸುನಂದಾ ಶರ್ಮಾ ಅವರು ಕಾರ್ಯಕ್ರಮ ರದ್ದುಗೊಳಿಸಿದರು. ನಂತರ ಪ್ರೇಕ್ಷಕರು ವಿನಂತಿಸಿದರೂ ಸುನಂದಾ ಶರ್ಮಾ ಮತ್ತೇ ಕಾರ್ಯಕ್ರಮ ನೀಡಲು ಮುಂದಾಗಲಿಲ್ಲ.
ಹುಚ್ಚಾಟ ತೋರಿದ ಪ್ರೇಕ್ಷಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದರು.




