Ad imageAd image

ರಸ್ತೆಗಳ ಮೇಲೆ ಲಾರಿಗಳ ದರ್ಬಾರ್

Bharath Vaibhav
ರಸ್ತೆಗಳ ಮೇಲೆ ಲಾರಿಗಳ ದರ್ಬಾರ್
WhatsApp Group Join Now
Telegram Group Join Now

ಸೇಡಂ:ತಾಲೂಕಿನ ಮುಧೋಳ ವ್ಯಾಪ್ತಿಯಲ್ಲಿ ಬರುವ ಮುಖ್ಯ ರಸ್ತೆಯ ಮೇಲೆ ಲಾರಿಗಳು ಅತಿ ಹೆಚ್ಚಾಗಿ ತಿರುಗಾಡುತ್ತಿದ್ದು ಅವುಗಳಲ್ಲಿ ಮಣ್ಣು ಸಾಗಣಿಕೆ ನಡೆಯುತ್ತಿದೆ.

ಇದರಿಂದ ದ್ವಿಚಕ್ರವಾಹನಗಳಿಗೆ ತೊಂದರೆಯಾಗುತ್ತಿದ್ದು ಲಾರಿಗಳ ಮೇಲೆ ತಡಪಾಲ ಹಾಕಿ ಮಣ್ಣು ಹೊರಬರದಂತೆ ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದರೆ ಪ್ರತ್ಯುತ್ತರ ನೀಡಿದ ಲಾರಿಗಳ ಮಾಲೀಕ ನಿಮಗೆ ಬೇಕಾದರೆ ಕಾರು ಖರೀದಿ ಮಾಡಿ ನಾವು ಹೀಗೆ ಓಡಿಸುತ್ತಿವೆ ಎಂದು ಹೇಳಿದ್ದಾರೆ ಎಂದು ಪವನ್ ಗೌಡ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಇದಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರಕರಣ ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಲ್ಲದೆ ಅವರಿಗೆ ಉಚಿತ ಸಲಹೆ ನೀಡುತ್ತಿರುವ ಮಾಲೀಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪವನ್ ಆಕ್ರೋಶ ವ್ಯಕ್ತಪಡಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!