Ad imageAd image

ಭ್ರಷ್ಟಚಾರದ ನಿರ್ಮೂಲನೆಗಾಗಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ; ರವಿ ಕೃಷ್ಣಾರೆಡ್ಡಿ

Bharath Vaibhav
ಭ್ರಷ್ಟಚಾರದ ನಿರ್ಮೂಲನೆಗಾಗಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ; ರವಿ ಕೃಷ್ಣಾರೆಡ್ಡಿ
WhatsApp Group Join Now
Telegram Group Join Now

ಬಾಗಲಕೋಟೆ :ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಯಾದ ನಾಗರಾಜ್ ಎಸ್ ಕಲಕುಟಗರ್ ಅವರ ಪರವಾದ ಚುನಾವಣಾ ಪ್ರಚಾರದಲ್ಲಿ ಸೋಮವಾರ ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಬಾಗಲಕೋಟೆ ನಗರದಲ್ಲಿ ಬಹಿರಂಗ ಪ್ರಚಾರ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು.ರೈತರ ಸಮಸ್ಯೆಗಳು,ನೀರಾವರಿ ಕೊರತೆ,ಉದ್ಯೋಗದ ಅಭಾವ ಮತ್ತು ಭ್ರಷ್ಟಾಚಾರದ ವಿಷಯಗಳನ್ನು ಉಲ್ಲೇಖಿಸಿ,ಜನರಿಗೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯವಿದೆಎಂದು ಹೇಳಿದರು.
“ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಪ್ರಮುಖ ಗುರಿಯಾಗಿದೆ.ರೈತರಿಗೆ ನೀರಾವರಿ ಸೌಲಭ್ಯ,ಯುವಕರಿಗೆ ಉದ್ಯೋಗ ಅವಕಾಶ,ಮಹಿಳೆಯರಿಗೆ ಭದ್ರತೆ ಮತ್ತು ಸಬಲೀಕರಣ ನೀಡಲು ಕೆ ಆರ್ ಎಸ್ ಪಕ್ಷ ಬದ್ಧವಾಗಿದೆ”. ಕಾಂಗ್ರೆಸ,ಬಿಜೆಪಿ ಪಕ್ಷಗಳು ವಂಶಪಾರಂಪರದ ರಾಜಕಾರಣವನ್ನು ಮುಂದುವರಿಸಿಕೊಂಡು ಹಣಬಲ, ಜಾತಿ , ಬಿಟ್ಟಿ ಭಾಗ್ಯಗಳ ಬಲವನ್ನ ಮಾರ್ಗವನಾಗಿಸಿಕೊಂಡು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿವೆ.ಕ್ಷೇತ್ರದ ಜನರ ಮೇಲೆ ಪ್ರೀತಿ,ವಿಶ್ವಾಸ ಇಲ್ಲದೆ ಇರುವ ಅಭ್ಯರ್ಥಿಗಳು ಚುನಾವಣಾ ಅಕ್ರಮಗಳನ್ನು ನಡೆಸಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ.ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಪ್ರತಿನಿತ್ಯ ಅನ್ಯಾಯ,ಅಕ್ರಮ,ಭ್ರಷ್ಟಾಚಾರ ನಡೆಯುತ್ತಿದ್ದು ರೈತರು,ಮಹಿಳೆಯರು, ಕೃಷಿ ಕಾರ್ಮಿಕರು ಸೇರಿದಂತೆ ದಿನನಿತ್ಯ ಹಲವಾರು ಸಾಮಾಜಿಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಅಭ್ಯರ್ಥಿಯನ್ನ ಬೆಂಬಲಿ ಮತ ನೀಡುವಂತೆ ಕೋರಿದರು.ನಮ್ಮ ಪಕ್ಷದ ಅಭ್ಯರ್ಥಿಯಾದ ನಾಗರಾಜ್ ಕಲಕುಟಗಾರ ಅವರು ಉತ್ತಮ ವಿದ್ಯಾಭ್ಯಾಸವನ್ನು ಹೊಂದಿದವರಾಗಿದ್ದು ಸದಾ ಜನರ ಕುಂದು ಕೊರತೆಗಳಿಗೆ,ಸಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಗುಣವುಳ್ಳವರಾಗಿದ್ದು ಈ ಬಾರಿ ನಮ್ಮ ಅಭ್ಯರ್ಥಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಈ ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದೀಪಕ್ ಸಿ ಎನ್,ರಾಜ್ಯ ಉಪಾಧ್ಯಕ್ಷರಾದ ಸೋಮಸುಂದರ್, ರಾಜ್ಯ ಕಾರ್ಯದರ್ಶಿಗಳು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿಗಳಾದ ವಿಜಯಕುಮಾರ್ ಯು ಬಿ, ರಾಜ್ಯ ಕಾರ್ಯದರ್ಶಿಗಳಾದ ಜೀವನ್,ಕೃಷ್ಣಾ ವಿ ಬಿ, ಆನಂದ್,ವೀರಭದ್ರಪ್ಪ, ಗಣಪತಿ ರಾಥೋಡ್, ಬಸವನಗೌಡಸಂತೋಷ್ ಹೂಗಾರ್,ಮಹೇಶ್,ನಿಜಾಂ ಜಮಾದಾರ್,ಯಮನಪ್ಪ ಭಗವತಿ,ಮಲ್ಲು ಕಡೆಮನಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!