ಬರ್ಹಾಮಪುರ: ಕೆರೆಗೆ ಈಜಲು ಹೋಗಿದ್ದ ೬ ಹಾಗೂ ೭ ನೇ ತರಗತಿಯ ಬಾಲಕಿಯರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿ ನಡೆದಿದೆ.
ಶಾಲೆಯಿಂದ ಮರಳಿ ಮನೆಗೆ ಬಂದ ೧೧ ವರ್ಷದ ಪ್ರಂಜಲಿ ದೋರಾ, ಮಾನಿನಿ ದೋರಾ ಕೆರೆಗೆ ಈಜಲು ತೆರಳಿ ಮೃತಪಟ್ಟಿದ್ದಾರೆ. ಈ ಇಬ್ಬರು ಬಾಲಕಿಯರನ್ನು ರಕ್ಷಿಸಲು ಯತ್ನಿಸಲಾಯಿತು. ಆದರೆ ಯತ್ನ ವಿಫಲವಾಯಿತು.
ಸುಮಾರು ಎರಡು ಗಂಟೆಗಳ ಹುಡುಕಾಟದ ನಂತರ ಬಾಲಕಿಯರನ್ನು ಪತ್ತೆ ಹಚ್ಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಬಾಲಕಿಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಈಜಲು ತೆರಳಿದ್ದ ಇಬ್ಬರು ಬಾಲಕಿಯರ ಸಾವು




