Ad imageAd image

ಭಾರತ ತಂಡಕ್ಕೆ ಮತ್ತೋರ್ವ ‘ಸೂರ್ಯ’ನ ಆಗಮನ ಸನ್ನಿಹಿತ

Bharath Vaibhav
ಭಾರತ ತಂಡಕ್ಕೆ ಮತ್ತೋರ್ವ ‘ಸೂರ್ಯ’ನ ಆಗಮನ ಸನ್ನಿಹಿತ
WhatsApp Group Join Now
Telegram Group Join Now

ವೈಭವ್ ಸೂರ್ಯವಂಶಿ ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೇ ಬಿರುಸಿನ ಆಟಕ್ಕೆ ಇಳಿದು ವಿಶ್ವದ ನಂ.೧ ಬೌಲರ್ ಬೂಮ್ರಾ ಎದುರು ತೋರಿದ ಧೈರ್ಯ ಆಡಿದ ರೀತಿ ಸಾಹಸ ಮಯ.
ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ೧೫ ಎಸೆತಗಳಲ್ಲಿ ಅರ್ಧ ಶತಕ ಗಳಿಸಿ ಗಮನ ಸೆಳೆದಿದ್ದರು.
ಈ ೧೯ ನೇ ಏಡಿಷನ್ ಐಪಿಎಲ್‌ನಲ್ಲಿ ಈವರೆಗೆ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿರುವ ಕಿರಿಯ ಎಡಗೈ ಆಟಗಾರ ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ೧೧ ಎಸೆತಗಳಲ್ಲಿ ೩೯ ರನ್‌ಗಳಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಬೂಮ್ರಾ ಹಾಗೂ ಟ್ರೆಂಟ್ ಬೋಲ್ಟ್ ರಂತಹ ವಿಶ್ವದ ಅಗ್ರಮಾನ್ಯ ಬೌಲರುಗಳನ್ನು ಎದುರಿಸಿದ ರೀತಿ ಅದ್ಭುತವಾಗಿತ್ತು. ವೈಭವ್ ಆಡುತ್ತಿರುವ ಆಟ ನೋಡಿದರೆ ಇನ್ನು ಅವರು ಭಾರತ ತಂಡವನ್ನು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುವ ದಿನಗಳು ದೂರ ಉಳಿದಿಲ್ಲ ಎಂದೇ ಹೇಳಬಹುದು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!