ದೆಹಲಿ: ಐಪಿಎಲ್ ಪಂದ್ಯಾವಳಿಯ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಇಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡುತ್ತಿದ್ದು, ದೊಡ್ಡ ಮೊತ್ತದ ಗುರಿಗೆ ಯತ್ನಿಸಲಿದೆ.
ಇಲ್ಲಿನ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ದೆಹಲಿ ಕ್ಯಾಪಿಟಲ್ಸ್ ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಬೇಗನೆ ನಿರ್ಗಮಿಸಿದ ಸಾಯಿ ಸುದರ್ಶನ್: ತಂಡದ ಮೊತ್ತ ೧೯ ಆಗಿದ್ದಾಗ ಸಾಯಿ ಸುದರ್ಶನ್ ೭ ಎಸೆತಗಳಲ್ಲಿ ೧೨ ರನ್ ಗಳಿಸಿ ನಿರ್ಗಮಿಸಿದರು.
ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಜಿಟಿ




