Ad imageAd image

 ಪ್ರತಿಯೊಂದು ಕೆಲಸ ಮಾಡಲು ಪೋಲಿಸರಿಗೆ ಸಾರ್ವಜನಿಕರ ಸಹಕಾರಬೇಕು:SP ಕೆ .ರಾಮರಾಜನ್

Bharath Vaibhav
 ಪ್ರತಿಯೊಂದು ಕೆಲಸ ಮಾಡಲು ಪೋಲಿಸರಿಗೆ ಸಾರ್ವಜನಿಕರ ಸಹಕಾರಬೇಕು:SP ಕೆ .ರಾಮರಾಜನ್
WhatsApp Group Join Now
Telegram Group Join Now

ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಗೋಕಾಕ ಉಪ ವಿಭಾಗದಲ್ಲಿ ಸುಮಾರು 5 ವರ್ಷಗಳ ಹಿಂದಿನಿಂದ ಕಳೆದುಹೋದ ಮೊಬೈಲಗಳನ್ನು,ಕಳ್ಳತನವಾಗಿದ್ದ ಪಂಪಸೇಟ್ ಮತ್ತು ಆಭರಣಗಳನ್ನು ಪತ್ತೆ ಹಚ್ಚಿ ಬೆಳಗಾವಿ ಎಸ್, ಪಿ, ಕೆ.ರಾಮರಾಜನ್ ಇವರು ವಾರಸುದಾರರಿಗೆ ಮರಳಿ ಹಸ್ತಾಂತರಿಸಿದರು.

ನಂತರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಎಸ್, ಪಿ ಕೆ ರಾಮರಾಜನ್ ಇವರು ಪ್ರತಿಯೊಂದು ಕೆಲಸಗಳನ್ನು ಪೋಲಿಸ್ ಇಲಾಖೆಯವರು ಮಾಡಬೇಕಾದರೆ ಅದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಬೇಕೆಂದು ಮಾದ್ಯಮದ ಮೂಲಕ ಸಾರ್ವಜನಿಕರಿಗೆ ಹೇಳಿದರು.

ಇನ್ನು KSP ಆ್ಯಪನಲ್ಲಿ ಉದ್ದೇಶ ಪೂರ್ವಕವಾಗಿ ಪೋಲಿಸ್ ಸಿಬ್ಬಂದಿಗಳ ಮೇಲೆ ದುರುದ್ದೇಶದಿಂದ ಕಂಪ್ಲೇಟ್ ಮಾಡ್ತಾಯಿದ್ದಾರೆ ಎಂಬ ಪ್ರಶ್ನೆಗೆ ಎಸ್,ಪಿ ಕೆ ರಾಮರಾಜನ್ ಮಾತನಾಡಿ ಕೆಲವರು ತಮ್ಮ ಅಕ್ರಮ ಚಟುವಟಿಕೆಗೆ ಪೋಲಿಸ್ ಸಿಬ್ಬಂದಿಗಳು ಕಡಿವಾಣ ಹಾಕಿರುತ್ತಾರೆ, ಅದೆ ಒಂದು ಕಾರಣಕ್ಕಾಗಿ ದುರುದ್ದೇಶದಿಂದ ಪೊಲಿಸ್ ಸಿಬ್ಬಂದಿಗಳ ಮೇಲೆ KSP ಆಪನಲ್ಲಿ ಕಂಪ್ಲೀಟ ಮಾಡ್ತಾಯಿದ್ದಾರೆ, ನಾವು ಅದರ ಸತ್ಯಾಸತ್ಯಥೆ ತಿಳಿದ ಮೇಲೆ ಅಧಿಕಾರಿಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದರು.

ಇನ್ಮುಂದೆ ಸಾರ್ವಜನಿಕರು ಮೊಬೈಲ್ ,ತಾವು ದರಿಸುವ ಸರಗಳು, ಮಾಂಗಲ್ಯ,ಕಳ್ಳತನ ಆದಲ್ಲಿ ಯಾವುದೆ ರೀತಿಯ ಭಯ ಪಡದೆ ಸ್ಥಳಿಯ ಪೋಲಿಸ್ ಠಾಣೆಗೆ ತೆರಳಿ ಪಿರ್ಯಾದಿ ನಿಡಿದರೆ, ಪೋಲಿಸ್ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆಂದರು.

ಅದರ ಜೊತೆಯಲ್ಲಿ ರಾಯಬಾಗ ಮತ್ತು ಕಾಗವಾಡ ತಾಲೂಕಿನ ರಾಜಾರೋಷವಾಗಿ ನಡೆಯುತ್ತಿರುವ ಮಟಕಾ ದಂದೆ, ಅಕ್ರಮ ಅಕ್ಕಿ ಸಾಗಾಟ ಮತ್ತು ವೈನನಲ್ಲಿ ಸಾರಾಯಿ ಮಾರಾಟದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅದರ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ತಕ್ಷಣ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅದಕ್ಕೆ ಮಾದ್ಯಮ ಸಹಕಾರ ಬೇಕು ಎಂದರು.

ಇದೆ ಸಂದರ್ಭದಲ್ಲಿ ಕೆ,ರಾಮರಾಜನ್ ಇವರು ಗೋಕಾಕದಲ್ಲಿ ಮಿಟರ ಬಡ್ಡಿ ದಂದೆ ನಡೆಯುತ್ತಿರುವ ಬಗ್ಗೆ ಹಲವಾರು ಪಿರ್ಯಾದಿಗಳು ಬಂದಿವೆ, ಬಡ್ಡಿಯ ನೇಪದಲ್ಲಿ ಅವರು ನೊಂದಣಿ ಮಾಡಿಸಿಕೊಂಡ ನಿಮ್ಮ ಅಸ್ತಿಯ ನೊಂದಣಿಯನ್ನು ರದ್ದು ಮಾಡಿಸುತ್ತೇವೆ ಅದಕ್ಕಾಗಿ ನೀವು ನೇರವಾಗಿ ನಮ್ಮ ಹತ್ತಿರ ಬಂದು ಕಂಪ್ಲೇಟ ಮಾಡಲು ತಿಳಿಸಿದರು.

ಇನ್ಮುಂದೆ ಯಾರಾದರೂ ಆರ್,ಬಿ, ಐ ಗೈಡಲೈನ್ಸ್ ನಿಯಮದಂತೆ ಮತ್ತು ಲೈಸನ್ಸ್ ಹೊಂದಿದವರು ನಿಯಮ ಮೀರಿ ಬಡ್ಡಿ ವಸೂಲಿ ಮಾಡಿದರೆ ಅಂತವರ ವಿರುದ್ದ ಹಳೆ ಕಾನೂನು ಮತ್ತು ಹೊಸ ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆಂದು ಖಡಕ್ಕಾಗಿ ಹೇಳಿದರು.

ಇನ್ನು ರಾತ್ರಿ ಹಗಲು ಕಳೆದು ಹೊದ ಮೊಬೈಲ್,ಕಳ್ಳತನವಾದ ನೀರಿನ ಮೊಟರ ಮತ್ತು ಆಬರಣಗಳನ್ನು ಪತ್ತೆಹಚ್ವಿದ ಗೋಕಾಕ ಉಪ ವಿಬಾಗದ ಪೋಲಿಸರಿಗೆ ಶ್ಲಾಘನೀಯ ವ್ಯಕಪಡಿಸಿದರು,

ಈ ಸಂದರ್ಭದಲ್ಲಿ ಗೋಕಾಕ ಉಪ ವಿಬಾಗ ಡಿಎಸ್ಪಿ ರವಿ ನಾಯಕ, ಸಿಪಿಆಯ್, ಆರ್, ಸುರೇಶಬಾಬು, ಶ್ರೀಶೈಲ ಬ್ಯಾಕೂಡ, ಪಿಎಸೈಗಳಾದ ಕೆ ವಾಲಿಕಾರ, ಕುರಣ ಮೊಹಿತೆ, ಯಮನಪ್ಪಾ ಮಾಂಗ ,ಆನಂದ ,ನೀಖಿಲ ಕಾಂಬಳೆ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!