ಕಲಘಟಗಿ : ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯ ಕಲಘಟಗಿ 2025 26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು ವಾಣಿಜ್ಯ ವಿಭಾಗದಲ್ಲಿ 98.45 % ಕಲಾವಿಭಾಗದಲ್ಲಿ 85.62% ಫಲಿತಾಂಶ ಲಭ್ಯವಾಗಿದೆ ವಾಣಿಜ್ಯ ವಿಭಾಗದಲ್ಲಿ ಕುಮಾರಿ ರೇಖಾ ಬೆಂಡಿಗೇರಿ 97.83% ಪ್ರಥಮ ಸ್ಥಾನ
ಕುಮಾರಿ ರುಕ್ಮಿಣಿ ಹೂಗಾರ್ 97% ದ್ವಿತೀಯ ಕುಮಾರಿ ಬಿಬಿ ಖುತೇಜಾ 96.66 % ತೃತೀಯ ಕುಮಾರಿ ಪೂರ್ಣಿಮ ವಾಲಿಕರ್ 96.66 %
ಕಲಾ ವಿಭಾಗದಲ್ಲಿ ಕುಮಾರಿ ದಾನವಾ ಸಿಂಧೆ 93.5% ಪ್ರಥಮ ಸ್ಥಾನ ಕುಮಾರಿ ಸಂಗೀತ ಬಡಿಗೇರ್ 93% ದ್ವಿತೀಯ ಸ್ಥಾನ
ಕುಮಾರಿ ನಿಖಿತಾ ವಡ್ಡರ್ 92.33% ತೃತೀಯ ಈ ಶೈಕ್ಷಣಿಕ ವರ್ಷದಲ್ಲಿ 289 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 264 ವಿದ್ಯಾರ್ಥಿಗಳು ಪಾಸಾಗಿದ್ದು, ಅತ್ಯುನ್ನತ ಶ್ರೇಣಿ 71 ಪ್ರಥಮ ದರ್ಜೆ 144 ದ್ವಿತೀಯ ದರ್ಜೆ 41 ತೃತೀಯ ದರ್ಜೆ 8 ವಿದ್ಯಾರ್ಥಿಗಳು ಪಾಸಾಗಿದ್ದು ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಚಾರ್ಯರು ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ
ವರದಿ :ನಿತೀಶಗೌಡ ತಡಸ ಪಾಟೀಲ್




