Ad imageAd image

ಪಿಯು ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ಜೀವಾವಧಿ ಶಿಕ್ಷೆ ಕೈದಿ

Bharath Vaibhav
ಪಿಯು ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ಜೀವಾವಧಿ ಶಿಕ್ಷೆ ಕೈದಿ
WhatsApp Group Join Now
Telegram Group Join Now

ಬಳ್ಳಾರಿ : ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಈ ಸಲ ದಾಖಲೆಯ ರಿಸಲ್ಟ್​ ಬಂದಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಹಗಲು, ರಾತ್ರಿ ಕಷ್ಟಪಟ್ಟು ಓದಿ ಪಾಸ್​ ಆದವರು ಫುಲ್ ಖುಷ್ ಆಗಿದ್ದಾರೆ.

ಅದರಲ್ಲೂ ವಿಶೇಷ ಎಂಬಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಓರ್ವ ಕೈದಿ 80.1% ಅಂಕಗಳನ್ನು ಗಳಿಸುವ ಮೂಲಕ ಸದ್ಯ ಗಮನ ಸೆಳೆದಿದ್ದಾರೆ.

ಜೈಲಿನ ಪ್ರತ್ಯೇಕ ಸೆಲ್​ನಲ್ಲಿ ಅಭ್ಯಾಸ

ಶಿಕ್ಷಾಬಂಧಿ ಅಶೋಕ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್​ನಲ್ಲಿ ಪಾಸಾಗಿದ್ದಾರೆ. ಜೈಲಿನ ಪ್ರತ್ಯೇಕ ಸೆಲ್​ನಲ್ಲಿಯೇ ಅಭ್ಯಾಸ ಮಾಡುತ್ತಿದ್ದರು.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ಅಶೋಕ್ ಕುಮಾರ್​ 600ಕ್ಕೆ 481 ಅಂಕ ಪಡೆದುಕೊಂಡಿದ್ದಾರೆ. ಕನ್ನಡ 82, ಇಂಗ್ಲಿಷ್ 69, ಇತಿಹಾಸ 94, ಅರ್ಥಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ 75 ಅಂಕಗಳನ್ನು ಪಡೆದುಕೊಂಡಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!