ಕೋಲ್ಕತ್ತಾ: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೫ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ೩ ವಿಕೆಟ್‌ಗಳ ಗೆಲುವು ಸಾಧಿಸಿತು.
ಜಯ ಸಾಧಿಸಲು ೧೮೨ ರನ್‌ಗಳಿಸಬೇಕಿದ್ದ ಲಕ್ನೋ ಸೂಪರ್ ಗೇಂಟ್ಸ್ ತಂಡವು ೨೦ ನೇ ಓವರ್‌ನ ಕಡೆಯ ಎಸೆತದಲ್ಲಿ ಜಯದ ಗುರಿ ತಲುಪಿತು.
ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಗೇಂಟ್ಸ್ ತಂಡವು ೩ ಪಂದ್ಯಗಳಲ್ಲಿ ೨ ಅನ್ನು ಗೆದ್ದು ೪ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದೆ.
ಕೆಕೆಆರ್ ತಾನಾಡಿರುವ ೪ ಪಂದ್ಯಗಳಲ್ಲಿ ೩ ರಲ್ಲಿ ಸೋತಿದ್ದು, ಒಂದು ಪಂದ್ಯ ಅನಿರ್ಣಿತದಿಂದ ೧ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೯ ನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಗೇಂಟ್ಸ್ ಗೆ ೩ ವಿಕೆಟ್‌ಗಳ ಜಯ




