——————————————————————-ಕುತೂಹಲ ಕೆರಳಿಸಿದೆ ಮದಗಜಗಳ ಕಾದಾಟ
ಗುವಾಹತಿ: ಭರ್ಜರಿ ಫಾರ್ಮ್ನಲ್ಲಿರುವ ಆರ್ಸಿಬಿ ಹಾಗೂ ಆರ್ಆರ್ ತಂಡಗಳು ಇಂದು ಇಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೬ ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ರಾಜಸ್ತಾನ್ ರಾಯಲ್ಸ್ ೩ ಪಂದ್ಯಗಳಿAದ ೬ ಪಾಯಿಂಟ್ ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ಸಿಬಿ ೨ ಪಂದ್ಯಗಳಿAದ ೪ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇಲ್ಲಿನ ಬರಸ್ಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಎರಡೂ ತಂಡಗಳಲ್ಲಿ ಬಲಾಢ್ಯ ಬ್ಯಾಟ್ಸಮನ್ಗಳಿದ್ದು, ಇಂದಿನ ಪಂದ್ಯ ಮದ ಗಜಗಳ ಕಾದಾಟದಂತೆ ಕಂಡು ಬರಲಿದೆ.




