ಇರಾನ್ ಜತೆ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆಯುವ ಶಾಂತಿ ಸಭೆ ಒಂದು ವೇಳೆ ವಿಫಲವಾದರೆ ಮತ್ತಷ್ಟು ಚುರುಕಿನಿಂದ ಯುದ್ಧ ಮಾಡಲು ಸಿದ್ದವಿರುವುದಾಗಿ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಹೇಳಿದ್ದಾರೆ.
ಇರಾನ್ ಶಾಂತಿ ಸಭೆ ಮುಂದಿಟ್ಟಿರುವ ಬೇಡಿಕೆಗಳಿಗೆ ಬದ್ಧರಾಗಿ ಒಂದು ವೇಳೆ ಶಾಂತಿ ಸಭೆ ವಿಫಲವಾದರೆ ಈ ಬಾರಿ ಹಡಗುಗಳಲ್ಲಿ ಪರಿಣಾಮಕಾರಿ ಅಸ್ತçಗಳನ್ನು ತುಂಬಿ ಸಜ್ಜುಗೊಳಿಸುತ್ತೇವೆ. ಇರಾನ್ ಜತೆಗಿನ ಯುದ್ಧ ಮತ್ತಷ್ಟು ಜೋರಾಗುತ್ತದೆ ಎಂದು ಟ್ರಂಫ್ ಹೇಳಿದ್ದಾರೆ.
೧೫ ದಿನಗಳ ಕದನ ವಿರಾಮ ಘೋಷಣೆಯಾಗಿ ಮಾತುಕತೆ ನಡೆಯುವುದಿದೆ. ಆದರೆ ಇದರ ನಡುವೆ ಇರಾನ್ ಹಾಗೂ ಅಮೇರಿಕ ತನ್ನ ತನ್ನ ಹಠಮಾರಿ ಧೋರಣೆಗೆ ಬದ್ಧರಾಗಿದ್ದು, ಮಾತಿನ ಸಮರ ಮುಂದುವರೆಸಿವೆ.
ಮಾತುಕತೆ ವಿಫಲವಾದರೆ ಇರಾನ್ ಮೇಲೆ ಮತ್ತಷ್ಟು ಪರಿಣಾಮಕಾರಿ ದಾಳಿ: ಟ್ರಂಫ್




