Ad imageAd image

ತುಂಗಭದ್ರಾ ನೀರಾವರಿ ಹಂಗಾಮಿ ಕಾರ್ಮಿಕರ ಪ್ರತಿಭಟನೆ!

Bharath Vaibhav
ತುಂಗಭದ್ರಾ ನೀರಾವರಿ ಹಂಗಾಮಿ ಕಾರ್ಮಿಕರ ಪ್ರತಿಭಟನೆ!
WhatsApp Group Join Now
Telegram Group Join Now

ಸಿರವಾರ : ರಾಯಚೂರು ಜಿಲ್ಲೆಯ ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ರಸ್ತೆ ತಡೆ ಚಳುವಳಿಯ ಮೂಲಕ ರಾಯಚೂರು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ತುಂಗಭದ್ರಾ ನೀರಾವರಿ ವಲಯದಲ್ಲಿ ದುಡಿಯುತ್ತಿರುವ ಹಂಗಾಮಿ ಕಾರ್ಮಿಕರು ವರ್ಷಗಳಿಂದ ಅನ್ಯಾಯ, ಶೋಷಣೆ ಹಾಗೂ ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ತಮ್ಮ ಕುಟುಂಬಗಳ ಜೀವನಾಧಾರಕ್ಕಾಗಿ ದುಡಿಯುವ ಕಾರ್ಮಿಕರಿಗೆ ಸರಿಯಾದ ವೇತನವಿಲ್ಲ, ಭದ್ರತೆ ಇಲ್ಲ, ಇಂತಹ ಪರಿಸ್ಥಿತಿಯಲ್ಲಿ ನಾವು ಮೌನವಾಗಿರುವುದು ಅಸಾಧ್ಯವಾಗಿದೆ. ಆದ್ದರಿಂದ ನಾವು ಸಿರಿವಾರ- ದೇವದುರ್ಗ ಕ್ರಾಸ್‌ನಲ್ಲಿ ರಸ್ತೆ ತಡೆ ಚಳುವಳಿ ನಡೆಸುವ ಮೂಲಕ ನಮ್ಮ ನ್ಯಾಯಸಮ್ಮತ ಹಲವು ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಧಿಕಾರಿಗಳಿಗೆ ಮಾನವಿ ಪತ್ರ ಸಲ್ಲಿಸಿ ಈ ಬೇಡಿಕೆಗಳು ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಅಲ್ಲ. ಕಾರ್ಮಿಕರ ಬದುಕು, ಅವರ ಹಕ್ಕುಗಳು ಮತ್ತು ಮಾನವೀಯ ಗೌರವಕ್ಕಾಗಿ ನಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಹೋರಾಟಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು ಈ ಸಂದರ್ಭದಲ್ಲಿ :
ಆರ್. ಮಾನಸಯ್ಯ. ಜಿ.ಅಡವಿರಾವ್. ಅಮರೇಗೌಡ. ಎಂ ಗಂಗಾಧರ್. ರುಕ್ಕಪ್ಪ. ಶರಣಪ್ಪ. ಹನುಮಂತಪ್ಪ. ಬಸವರಾಜ. ರಮೇಶ್. ಆದೇಶ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ  : ಬಸವರಾಜ ಬುಕ್ಕನಹಟ್ಟಿ. 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!