ಸಣ್ಣ ನೀರಾವರಿ ಇಲಾಖೆಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ರೂ.100 ಲಕ್ಷ ವೆಚ್ಚದಲ್ಲಿ 2 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಶಾಸಕ ಹಾಗೂ ಕ.ಗೃ.ಮಂ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಇಂದು ತಿರುಪತಿ ಗ್ರಾಮದ ಬಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ನಾನು ಶಾಸಕನಾಗುವುದಕ್ಕಿಂತ ಮೊದಲು ನಮ್ಮ ಅರಸೀಕೆರೆ ಕ್ಷೇತ್ರ ಬಯಲು ಸೀಮೆ ಬರಪೀಡಿತ ಪ್ರದೇಶವಾಗಿತ್ತು, ಅಂತರ್ಜಲ ಮಟ್ಟ ಸಾವಿರಾರು ಅಡಿಗೆ ಇಳಿದಿತ್ತು, ಇದನ್ನು ಮನಗಂಡು ಸದನದಲ್ಲಿ ಹೋರಾಟ ಮಾಡಿ ಅಂತರ್ಜಲ ಅಭಿವೃದ್ಧಿ ಆಗಬೇಕಾದರೆ ಚೆಕ್ ಡ್ಯಾಂ ಗಳನ್ನ ನಿರ್ಮಾಣ ಮಾಡಬೇಕೆಂದು ಸರ್ಕಾರಗಳಿಗೆ ಒತ್ತಾಯ ಮಾಡಿ ಅನುದಾನ ತರಲಾಯಿತು.

ಅದರ ಪರಿಣಾಮ ನಮ್ಮ ಕ್ಷೇತ್ರದಲ್ಲಿ ನೂರಾರು ಚೆಕ್ ಡ್ಯಾಂಗಳು ನಿರ್ಮಾಣವಾದವು. ಇಂದು ನಾವು ಅಂತರ್ಜಲ ಶೇಖರಣೆಯಲ್ಲಿ ನಾವು ಮುಂದಿದ್ದೇವೆ.ಇಂದು ಕೇವಲ 200 ರಿಂದ 300 ಅಡಿಗಳಲ್ಲಿ ನೀರು ದೊರೆಯುತ್ತಿದೆ. ಇದರಿಂದ ರೈತರುಗಳಿಗೆ ಅನುಕೂಲವಾಗಿದೆ. ಇಂತಹ ಯೋಜನೆಗಳನ್ನು ಮತ್ತೂ ಮುಂದುವರಿಸಲಾಗುವುದು ಎಂದರು.
ಈ ಕಾರ್ಯಕ್ರಮ ದಲ್ಲಿ ಅಗ್ಗುಂದ ಮಾಜಿ ಅಧ್ಯಕ್ಷ ರಾದ ತಿರುಪತಿ ಗಿರೀಶ, ಮುಖಂಡರಾದ ತಿರುಪತಿ ಚಂದ್ರಣ್ಣ, ರಂಗಸ್ವಾಮಿ, ಕಾರೆಹಳ್ಳಿ ಈಶಣ್ಣ, ಬೊಮ್ಮೇನಹಳ್ಳಿ ವಡ್ಡರಹಟ್ಟಿ ರೇವಣ್ಣ, ಗೊಲ್ಲರಹಟ್ಟಿ ರಾಜಶೇಖರ, ಬೋರನಕೊಪ್ಪಲು ಶಿವಲಿಂಗಪ್ಪ, ಯಳವಾರೆ ಕೇಶವಣ್ಣ, ಇಂಜಿನಿಯರ್ ಉಮೇಶ, ಗುತ್ತಿಗೆದಾರ ಜ್ಞಾನೇಶ ಹಾಗೂ ಗ್ರಾಮಸ್ಥರು ಹಾಜರಿದ್ದರು..
ವರದಿ :ರಾಜು ಅರಸಿಕೆರೆ




