ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೯ ನೇ ಪಂದ್ಯದಲ್ಲಿ ಎದುರಾಗಲಿವೆ.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ಇಂದು ಮಧ್ಯಾಹ್ನ ೩:೩೦ ಕ್ಕೆ ಆರಂಭವಾಗಲಿದೆ.
ಲಕ್ನೋ ಸೂಪರ್ ಗೇಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟನ್ಸ್ ತಂಡವು ೭ ನೇ ಸ್ಥಾನದಲ್ಲಿದೆ. ಹೀಗಾಗಿ ಎರಡೂ ತಂಡಗಳು ಇಂದು ಗೆಲುವಿಗೆ ತೀವ್ರ ಪ್ರಯತ್ನ ಮಾಡಲಿವೆ.
ಇಂದು ಎಲ್ಎಸ್ಜಿಗೆ ಜಿಟಿ ಎದುರಾಳಿ




