Ad imageAd image

ದಾಖಲೆ ಬರೆದ ಹಟ್ಟಿ ಚಿನ್ನದ ಗಣಿ : ಬರೋಬ್ಬರಿ 1691.5 ಕೆಜಿ ಚಿನ್ನ ಉತ್ಪಾದನೆ

Bharath Vaibhav
ದಾಖಲೆ ಬರೆದ ಹಟ್ಟಿ ಚಿನ್ನದ ಗಣಿ : ಬರೋಬ್ಬರಿ 1691.5 ಕೆಜಿ ಚಿನ್ನ ಉತ್ಪಾದನೆ
WhatsApp Group Join Now
Telegram Group Join Now

ರಾಯಚೂರು: ಚಿನ್ನ ಉತ್ಪಾದನೆಯಲ್ಲಿ ಹಿನ್ನಡೆ ಕಂಡಿದ್ದ ಹಟ್ಟಿ ಚಿನ್ನದ ಗಣಿ ಕಂಪನಿ 2025- 26 ನೇ ಸಾಲಿನಲ್ಲಿ ಶೇಕಡ 99.50 ರಷ್ಟು ಉತ್ಪಾದನೆ ಮಾಡುವ ಗಮನಾರ್ಹ ಗುರಿ ಮುಟ್ಟಿದೆ.

ಈ ಸಾಲಿನಲ್ಲಿ 1,700 ಕೆಜಿ ಚಿನ್ನ ಉತ್ಪಾದಿಸುವ ಗುರಿಯಲ್ಲಿ 1691.5 ಕೆಜಿ ಚಿನ್ನ ಉತ್ಪಾದಿಸುವ ಮೂಲಕ ಹಟ್ಟಿ ಚಿನ್ನದ ಗಣಿ ಕಂಪನಿ ಗುರಿ ಸಮೀಪಿಸಿದೆ.

ಈ ಸಾಧನೆಯೊಂದಿಗೆ 2025 -26 ನೇ ಸಾಲಿನಲ್ಲಿ ಉತ್ಪಾದನೆಯಲ್ಲಿ ಶೇಕಡ 99.50 ಪ್ರಗತಿ ಸಾಧಿಸಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಜೆ.ಟಿ. ಪಾಟೀಲ್ ತಿಳಿಸಿದ್ದಾರೆ.

ಗಣಿ ಕಾರ್ಮಿಕರ ಶ್ರಮ, ಇಂಜಿನಿಯರ್ ಗಳ ತಾಂತ್ರಿಕ ಪರಿಣಿತಿ, ಅಧಿಕಾರಿಗಳ ಕಾರ್ಯ ಶೈಲಿ ಈ ಸಾಧನೆಗೆ ಕಾರಣವಾಗಿದೆ. ಕಂಪನಿಯಲ್ಲಿ ಕಾರ್ಯಾಚರಣೆಗಳಲ್ಲಿ ತಂತ್ರಜ್ಞಾನ ಸಮರ್ಪಕ ಬಳಕೆ ಮಾಡಿಕೊಂಡು ಚಿನ್ನದ ಉತ್ಪಾದನೆ ಹೆಚ್ಚಿಸಲಾಗಿದೆ ಎಂದು ಜೆ.ಟಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!