Ad imageAd image

ನನ್ನ ಮೇಲೆ ಯಾವುದೇ ಅಸಭ್ಯ ವರ್ತನೆ ನಡೆದಿಲ್ಲ, ಶ್ರೀಗಳ ವಿರುದ್ಧ ದೂರು ನೀಡಿಲ್ಲ : ಸಂತ್ರಸ್ತೆ ವಿಡಿಯೋ

Bharath Vaibhav
ನನ್ನ ಮೇಲೆ ಯಾವುದೇ ಅಸಭ್ಯ ವರ್ತನೆ ನಡೆದಿಲ್ಲ, ಶ್ರೀಗಳ ವಿರುದ್ಧ ದೂರು ನೀಡಿಲ್ಲ : ಸಂತ್ರಸ್ತೆ ವಿಡಿಯೋ
WhatsApp Group Join Now
Telegram Group Join Now

ಬಾಗಲಕೋಟೆ: ಇತ್ತೀಚೆಗಷ್ಟೇ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ವಿರುದ್ಧ ಕೇಳಿಬಂದಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು ಎಂದು ಸಂತ್ರಸ್ತ ಮಹಿಳೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. “ನನ್ನ ಮೇಲೆ ಯಾವುದೇ ಅಸಭ್ಯ ವರ್ತನೆ ನಡೆದಿಲ್ಲ, ಶ್ರೀಗಳ ವಿರುದ್ಧ ನಾನು ದೂರು ನೀಡಿಲ್ಲ” ಎಂದು ಅವರು ಹೇಳಿದ್ದಾರೆ.

ದೂರಿನ ಬಗ್ಗೆ ಮಹಿಳೆಯ ಸ್ಪಷ್ಟನೆ

ಟಿವಿಯಲ್ಲಿ ವರದಿ ಬಂದಾಗಲೇ ನನಗೆ ಈ ವಿಚಾರ ತಿಳಿದಿದ್ದು ಎಂದು ಮಹಿಳೆ ಹೇಳಿದ್ದಾರೆ. “ನಾನು ಶ್ರೀಗಳ ವಿರುದ್ಧ ಯಾವುದೇ ದೂರು ನೀಡಿಲ್ಲ. ಯಾರೋ ದುಷ್ಕರ್ಮಿಗಳು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ದೂರು ನೀಡಿದ್ದಾರೆ. ನನ್ನ ಮತ್ತು ಸ್ವಾಮೀಜಿ ನಡುವೆ ಇರುವುದು ಕೇವಲ ಭಕ್ತೆ ಹಾಗೂ ಗುರುವಿನ ಪವಿತ್ರ ಸಂಬಂಧ ಮಾತ್ರ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಜಯಪುರದ ಗಲಾಟೆ ಕುರಿತು ವಿವರಣೆ

ವಿಜಯಪುರದಲ್ಲಿ ನಡೆದ ಗಲಾಟೆಯ ಬಗ್ಗೆಯೂ ಮಾತನಾಡಿದ ಅವರು, “ಆ ಸಮಯದಲ್ಲಿ ನಾನು ಕೇವಲ ಶ್ರೀಗಳ ಜೊತೆ ಮಾತನಾಡಬೇಕು ಎಂದು ಕರೆದಿದ್ದೆ. ಆಗ ನನ್ನ ಸಂಬಂಧಿಯೊಬ್ಬರು ಕೂಗಾಡಿದ್ದರೇ ಹೊರತು, ನಾವು ಶ್ರೀಗಳಿಗೆ ಕೆಟ್ಟ ಶಬ್ದಗಳಿಂದ ಬೈದಿಲ್ಲ. ಇದನ್ನೇ ದೊಡ್ಡದು ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ” ಎಂದಿದ್ದಾರೆ.

ಹಣದ ಬೇಡಿಕೆಯ ಆರೋಪ ನಿರಾಕರಣೆ

ಶ್ರೀಗಳ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಮಹಿಳೆ, “ನಮಗೆ ಹಣ ಕೇಳುವಂತಹ ಪರಿಸ್ಥಿತಿ ಬಂದಿಲ್ಲ ಮತ್ತು ನಾವು ಅಂತಹ ಬೇಡಿಕೆಯನ್ನೂ ಇಟ್ಟಿಲ್ಲ. ಏಪ್ರಿಲ್ 6ರಂದು ನೀಡಿರುವ ದೂರು ಯಾರು ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಅದನ್ನು ಯಾರೂ ನಂಬಬೇಡಿ” ಎಂದು ಮನವಿ ಮಾಡಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!