Ad imageAd image

ವ್ಯವಸ್ಥಿತ ಷಡ್ಯಂತ್ರ ಮಾಡಿ ನನ್ನ ಉಚ್ಚಾಟನೆ ಮಾಡಿದ್ದಾರೆ : ವಚನಾನಂದ ಸ್ವಾಮೀಜಿ 

Bharath Vaibhav
ವ್ಯವಸ್ಥಿತ ಷಡ್ಯಂತ್ರ ಮಾಡಿ ನನ್ನ ಉಚ್ಚಾಟನೆ ಮಾಡಿದ್ದಾರೆ : ವಚನಾನಂದ ಸ್ವಾಮೀಜಿ 
WhatsApp Group Join Now
Telegram Group Join Now

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀಗಳನ್ನು ಇಂದು ಧರ್ಮದರ್ಶಿ ಟ್ರಸ್ಟಿಗಳು ಉಚ್ಚಾಟನೆಗೊಳಿಸಿದ್ದಾರೆ. ಉಚ್ಚಾಟನೆಗೊಂಡ ಬಳಿಕ ವಚನಾನಂದ ಶ್ರೀಗಳು ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಂಚಮಸಾಲಿ ಸಮುದಾಯದ ನಾಯಕರು ಬಲಿಷ್ಠರಾಗುತ್ತಿದ್ದಾರೆ. ಹೀಗಾಗಿ ಪಂಚಮಸಾಲಿ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಭಕ್ತರು ಏನು ಹೇಳುತ್ತಾರೋ ಅದೇ ಫೈನಲ್. ನಾಲ್ಕು ಜನ ಹೇಳಿದ್ದು ಅಂತಿಮ ಆಗಲ್ಲ. ಈ ವಿಚಾರವಾಗಿ ಪಂಚಮಸಾಲಿ ಮುಖಂಡರು ಚರ್ಚೆ ಮಾಡುತ್ತಾರೆ. ಭಕ್ತರು ಪಂಚಮಸಾಲಿ ಗುರು ಪೀಠದ ಲೆಕ್ಕ ಕೇಳುತ್ತಿದ್ದಾರೆ ಪಂಚಮಸಾಲಿ ಸಮುದಾಯದ ಜನರು ಸತ್ಯವನ್ನು ಅರಿತುಕೊಳ್ಳಬೇಕು.

ನನ್ನ ಉಚ್ಛಾಟನೆ ಹಾಸ್ಯಾಸ್ಪದವಾಗಿದೆ. ಪಂಚಮಸಾಲಿ ಸಮುದಾಯದ ಭಕ್ತರು ಟ್ರಸ್ಟ್ ನವರಿಗೆ ಲೆಕ್ಕ ಕೇಳುತ್ತಿದ್ದಾರೆ. ಟ್ರಸ್ಟ್ ನವರಿಗೆ ಲೆಕ್ಕ ಕೇಳಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ವಚನಾನಂದ ಸ್ವಾಮೀಜಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!