Ad imageAd image

ರಸ್ತೆ ಅಪಘಾತಕ್ಕೆ ತುತ್ತಾಗಿ 10 ತಿಂಗಳ ಮಗು ಸಾವು : ಅಂಗಾಂಗ ದಾನ ಮಾಡಿ ಮಾನವೀಯತೆ

Bharath Vaibhav
ರಸ್ತೆ ಅಪಘಾತಕ್ಕೆ ತುತ್ತಾಗಿ 10 ತಿಂಗಳ ಮಗು ಸಾವು : ಅಂಗಾಂಗ ದಾನ ಮಾಡಿ ಮಾನವೀಯತೆ
WhatsApp Group Join Now
Telegram Group Join Now

ತಿರುವನಂತಪುರಂ: ರಸ್ತೆ ಅಪಘಾತಕ್ಕೆ ತುತ್ತಾಗಿದ್ದ 10 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ‘ಬ್ರೈನ್ ಡೆಡ್’ (ಮೆದುಳು ಸಾವು) ಎಂದು ಘೋಷಿಸಲ್ಪಟ್ಟಿತು. ಈ ತೀವ್ರ ದುಃಖದ ನಡುವೆಯೂ ಮಗುವಿನ ಪೋಷಕರು ತಮ್ಮ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಇದರೊಂದಿಗೆ ಈ ಮಗು ಕೇರಳದ ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯ ನಿವಾಸಿಗಳಾದ ಎಲಿನ್ಶೆರಿನ್ ಅಬ್ರಹಾಂ ಎಂಬ ಪುಟ್ಟ ಮಗು ಫೆಬ್ರವರಿ 5 ರಂದು ಕೊಟ್ಟಾಯಂ ಸಮೀಪದ ಎಂಸಿ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿತ್ತು. ಮಗು ತನ್ನ ತಾಯಿ ಮತ್ತು ಅಜ್ಜ-ಅಜ್ಜಿಯ ಜೊತೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಮೊದಲು ಚಂಗನಾಶ್ಶೇರಿ ಮತ್ತು ತಿರುವಲ್ಲಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಅಮೃತ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಮಗು ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದರು.ಪೋಷಕರ ಸಮ್ಮತಿಯ ನಂತರ, ಮಗುವಿನ ಅಂಗಗಳನ್ನು ದಾನ ಮಾಡಲಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!