Ad imageAd image

ಆಪರೇಷನ್ ಸಿಂಧೂರ್ ಸಮಯದಲ್ಲಿ ಹಾಲು, ಲಸ್ಸಿ ವಿತರಿಸಿದ್ದ 10 ವರ್ಷದ ಬಾಲಕನಿಗೆ ಸೇನೆಯಿಂದ ಸನ್ಮಾನ 

Bharath Vaibhav
ಆಪರೇಷನ್ ಸಿಂಧೂರ್ ಸಮಯದಲ್ಲಿ ಹಾಲು, ಲಸ್ಸಿ ವಿತರಿಸಿದ್ದ 10 ವರ್ಷದ ಬಾಲಕನಿಗೆ ಸೇನೆಯಿಂದ ಸನ್ಮಾನ 
WhatsApp Group Join Now
Telegram Group Join Now

ಪಂಜಾಬ್ : ಆಪರೇಷನ್ ಸಿಂಧೂರ್ ಸಮಯದಲ್ಲಿ ದೇಶದ ಸೈನಿಕರು ಭಾರತ-ಪಾಕಿಸ್ತಾನ ಗಡಿಯನ್ನು ಕಾಯುತ್ತಿದ್ದಾಗ, ಪಂಜಾಬ್‌ನ ಫಿರೋಜ್‌ಪುರದ ಒಂದು ಸಣ್ಣ ಹಳ್ಳಿಯ 10 ವರ್ಷದ ಬಾಲಕ ಅವರಿಗೆ ಹಾಲು, ಲಸ್ಸಿ ನೀಡುತ್ತಿದ್ದ. ಇದನ್ನು ಮೆಚ್ಚಿದ ಸೇನೆ ಬಾಲಕನಿಗೆ ಸನ್ಮಾನ ಮಾಡಿದೆ.

ಪಂಜಾಬ್‌ನ ತಾರಾ ವಾಲಿ ಗ್ರಾಮದಲ್ಲಿ ಆಪರೇಷನ್ ಸಿಂದೂರ್‌ನ ಸದ್ದು ಇಡೀ ಗ್ರಾಮದಲ್ಲಿ ಪ್ರತಿಧ್ವನಿಸುತ್ತಿತ್ತು. ಈ ಭಯದ ವಾತಾವರಣದ ನಡುವೆಯೂ 10 ವರ್ಷದ ಬಾಲಕ ಶ್ರವಣ್ ಬಿರು ಬಿಸಿಲಿನ ನಡುವೆಯೂ ದೇಶ ಕಾಯುವ ಕಾಯಕದಲ್ಲಿ ತೊಡಗಿದ್ದ ಯೋಧರಿಗೆ ನೀರು ಟೀ, ಲಕ್ಷ್ಮಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿದ್ದನು. ಈ ಬಾಲಕನ ಸೇವೆಯನ್ನು ಗುರುತಿಸಿದ ಸೇನೆ ಈಗ ಆ ಬಾಲಕನಿಗೆ ಸನ್ಮಾನ ಮಾಡಿ ಗೌರವಿಸಿದೆ. 7ನೇ ಪದಾತಿ ದಳದ ವಿಭಾಗದ ಕಮಾಂಡಿಂಗ್ ಜನರಲ್ ಆಫೀಸರ್ ಆಗಿರುವ ಮೇಜರ್ ಜನರಲ್ ರಂಜಿತ್ ಸಿಂಗ್ ಮಾಲ್ ಅವರು ಶ್ರವಣ್ ಅವರನ್ನು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಶ್ರವಣ್ ತಾನು ಸೇನೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನನಗೆ ಭಯವಾಗಲಿಲ್ಲ, ನಾನು ದೊಡ್ಡವನಾದ ಮೇಲೆ ಸೈನಿಕನಾಗಲು ಬಯಸುತ್ತೇನೆ. ಸೈನಿಕರಿಗೆ ನೀರು, ಲಕ್ಷ್ಮಿ ಮತ್ತು ಐಸ್ ತರುತ್ತಿದ್ದೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಶ್ರವಣ್ ಸಿಂಗ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಈ ವೇಳೆ ಬಾಲಕನಿಗೆ ಸ್ಮರಣಿಕೆ, ವಿಶೇಷ ಊಟ ಮತ್ತು ಅವನ ನೆಚ್ಚಿನ ಐಸ್ ಕ್ರೀಮ್ ಅನ್ನು ಉಡುಗೊರೆಯಾಗಿ ನೀಡಲಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!