ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಎಲ್ಲ ಸ್ಥಳೀಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಣಕಾಸು ವಾರ್ಷಂತ್ಯದ ಹೊಸ್ತಿಲಲ್ಲಿವೆ. ಹಣಕಾಸು ವ್ಯವಹಾರ, ಲೆಕ್ಕ, ದಾಖಲಾತಿ ಕೆಲಸಗಳಲ್ಲಿ ಮುಳುಗಿವೆ. ಏಕೆಂದರೆ ಮಾರ್ಚ್ 31ರಂದು 2024-2025ರ ಆರ್ಥಿಕ ವರ್ಷ ಕೊನೆಗೊಳ್ಳಲಿದೆ. ಏಪ್ರಿಲ್ 1ರಿಂದ 2025-2026ರ ಹೊಸ ಹಣಕಾಸು ವರ್ಷ ಶುರುವಾಗುತ್ತದೆ. ವರ್ಷದ ಮೊದಲ ತಿಂಗಳೇ (ಏಪ್ರಿಲ್) ಬ್ಯಾಂಕ್‌ಗಳಿಗೆ ಭರ್ಜರಿ ರಜೆ ಘೋಷಣೆ ಆಗಿವೆ.
ಹೌದು, ಏಪ್ರಿಲ್‌ನಲ್ಲಿ ಬ್ಯಾಂಕ್‌ಗಳು ಎಷ್ಟು ರಜೆ ಇರಲಿವೆ ಎಂಬುದನ್ನು ಗ್ರಾಹಕರು ಗಮನಿಸುತ್ತಿರುತ್ತೀರಿ. ಕಳೆದ ಎರಡು ತಿಂಗಳಿಂದಲೂ ವಿವಿಧ ಕಾರಣಗಳಿಗೆ ಬ್ಯಾಂಕ್‌ಗಳಿಗೆ ಹಾಲಿಡೇ ಪಡೆದಿವೆ. ಇದೀಗ ಮುಂದಿನ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್‌ಗಳು 12 ದಿನ ರಜೆ ಪಡೆದಿವೆ. ಏಪ್ರಿಲ್‌ನಲ್ಲಿ ಅರ್ಧ ತಿಂಗಳು ಮಾತ್ರವೇ ಬ್ಯಾಂಕ್ ಗಳು ಕಾರ್ಯಾಚರಣೆ ಮಾಡುತ್ತವೆ ಎನ್ನಲಾಗಿದೆ.
ಕರ್ನಾಕದಲ್ಲಿ 10 ಏಪ್ರಿಲ್ 2025 ರಂದು ಮಹಾವೀರ ಜಯಂತಿ ಪ್ರಯುಕ್ತ ಬ್ಯಾಂಕ್‌ಗಳು ರಜೆ ಇರಲಿವೆ. ನಂತರ ಏಪ್ರಿಲ್ 12ರಂದು ಎರಡನೇ ಶನಿವಾರ, ಏಪ್ರಿಲ್ 14 ರಂದು ಡಾ. ಅಂಬೇಡ್ಕರ್ ಜಯಂತಿ, ಏಪ್ರಿಲ್ 18 ರಂದು ಶುಭ ಶುಕ್ರವಾರ (ಗುಡ್‌ಫ್ರೈಡೆ), ಏಪ್ರಿಲ್ 26 ರಂದು ನಾಲ್ಕನೇ ಶನಿವಾರ ಮತ್ತು ಏಪ್ರಿಲ್ 30ರಂದು ಬಸವ ಜಯಂತಿ ಆಚರಣೆಗಳು ಬರುತ್ತವೆ. ಇದು ನೋಡಿದರೆ ಒಟ್ಟು 06 ದಿನಗಳು ಬ್ಯಾಂಕ್‌ಗಳು ಬಂದ್ ಆಗಿರಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ಬ್ಯಾಂಕಿಂಗ್ ರಜೆ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಈ ಕಾರಣದಿಂದಲೇ ಬರುವ ಆರ್ಥಿಕ ವರ್ಷದಿಂದ ದೇಶದ ಎಲ್ಲ ಬ್ಯಾಂಕ್‌ಗಳು ವಾರಕ್ಕೆ 05 ದಿನ ಮಾತ್ರವೇ ಕೆಲಸ ಮಾಡಬೇಕು. ವಾರದಲ್ಲಿ ಎರಡು ದಿನ ರಜೆ ಪಡೆಯುವ ಹೊಸ ನಿಯಮ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದೆ. ಈ ಹೊಸ ನಿಯಮ ಪ್ರಕಾರ, ಬ್ಯಾಂಕ್‌ಗಳಿಗೆ ಇನ್ಮುಂದೆ ಪ್ರತಿ ತಿಂಗಳು 04 ಕೆಲವೊಮ್ಮೆ 05 ಭಾನುವಾರಗಳ ಜೊತೆಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಪಡೆಯುತ್ತಿದ್ದ ರಜೆಗಳು ಎಲ್ಲ ಶನಿವಾರಗಳಿಗೂ (1ನೇ ಶನಿವಾರ ಮತ್ತು 3ನೇ ಶನಿವಾರ) ವಿಸ್ತರಣೆ ಆಗಿದೆ. ಹೀಗಾಗಿ ಹೆಚ್ಚಿನ ದಿನಗಳು ಬ್ಯಾಂಕ್ ಬಂದ್ ಆಗಿರಲಿವೆ. ಗ್ರಾಹಕರು ಗಮನಿಸಿ ವ್ಯವಹರಿಸಬೇಕೆಂದು ಕೋರಿದೆ.