Ad imageAd image

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಪೊಲೀಸರ ಮಗನೇ ಬಾಗಿ 

Bharath Vaibhav
15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಪೊಲೀಸರ ಮಗನೇ ಬಾಗಿ 
RAPE
WhatsApp Group Join Now
Telegram Group Join Now

ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬೆಳಗಾವಿ ನಗರದ ಹೊರವಲಯದಲ್ಲಿರುವ ರೆಸಾಟ್೯ನಲ್ಲಿ ಮೂರು ಜನ ಅಪ್ತಾಪ್ತ ಬಾಲಕರು 15 ವರ್ಷದ ಬಾಲಕಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ನಡೆದಿದೆ. ಹತ್ತು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಮನೆಗೆ ಬಾಲಕಿ ವಾಪಾಸ್ ಆದಾಗ ಹೊಟ್ಟೆ ನೋವು ಎಂದಿದ್ದಳು.

ಈ ಪ್ರಕರಣದಲ್ಲಿ ಸಾಕೀಬ್ ಎಂಬಾತನನ್ನು ಒಳಗೊಂಡಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಸ್ನೇಹಿತನಾಗಿದ್ದ ಒಬ್ಬ ಅಪ್ರಾಪ್ತ ಆರೋಪಿಯು ಆಕೆಯನ್ನು ರೆಸಾರ್ಟ್‌ಗೆ ಕರೆತಂದಿದ್ದಾನೆ.

ಸಾಕೀಬ್ ಈ ಮೊದಲೇ ರೆಸಾರ್ಟ್‌ನಲ್ಲಿ ರೂಮ್ ಬುಕ್ ಮಾಡಿದ್ದರು. ಆಕೆಯನ್ನು ರೆಸಾರ್ಟ್‌ಗೆ ಕರೆತಂದ ನಂತರ, ಮೂವರು ಆರೋಪಿಗಳು ಸಾಮೂಹಿಕವಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಮಗನೊಬ್ಬ ಶಾಮಿಲಾಗಿದ್ದಾನೆ. ಅವನನ್ನು ಹೊರತು ಪಡಿಸಿ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಕೀಬ್ ಎಂಬಾತ ತನ್ನ ಹೆಸರಲ್ಲಿ ರೂಮ್ ಬುಕ್ ಮಾಡಿದ್ದರು. ಬಾಲಕಿಯ ಸ್ನೇಹಿತ ಅಪ್ರಾಪ್ತ ಆಕೆಯನ್ನ ಕರೆದುಕೊಂಡು ಹೋಗಿದ್ದ.ಮತ್ತೋರ್ವ ಅಪ್ರಾಪ್ತ ಬಾಲಕನಿಗೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!