ಬೆಳಗಾವಿ: ಕಾರ್ ರಿವರ್ಸ್ ತೆಗೆದುಕೊಳ್ಳುವಾಗ ವೇಳೆ ಚಕ್ರಕ್ಕೆ ಸಿಲುಕಿ 2 ವರ್ಷದ ಮಗು ಮೃತಪಟ್ಟ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಜಗೌಡನಟ್ಟಿ ಗ್ರಾಮದಲ್ಲಿ ನಡೆದಿದೆ.
ಅನುಶ್ರೀ ರಾಮಕೃಷ್ಣ ಖೋತ(2) ಮೃತಪಟ್ಟ ಮಗು. ಪಕ್ಕದ ಮನೆಯ ಬಸವರಾಜ ಖೋತ ತಮ್ಮ ಕಾರನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ.
ಮನೆ ಬಳಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಹಿಂದೆ ಬರುತ್ತಿದ್ದ ಕಾರ್ ಚಕ್ರದ ಅಡಿಗೆ ಸಿಲುಕಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.