ನವದೆಹಲಿ : ಯಾವಾಗ… ಹೇಗೆ..? ಯಾವ ಸ್ವರೂಪದಲ್ಲಿ ಯಾರಿಗೆ ಸಾವು ಬರುತ್ತೆ ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ.
ಇಲ್ಲೂ ಅಂಥಹದ್ದೆ ದುರಂತವೊಂದು ನಡೆದುಹೋಗಿದೆ. ಯುವತಿಯೋರ್ವಳು ತನ್ನ ಸಹೋದರಿಯ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುವಾಗಲೇ ಹಾರ್ಟ್ ಅಟ್ಯಾಕ್ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಎಂಬಲ್ಲಿ ನಡೆದಿದೆ.
ಅಂದಾಜು 25 ವರ್ಷದ ಯುವತಿಯು, ಆಶಾ ಭೋಸ್ಲೆ ಹಾಗೂ ಸೋನು ನಿಗಮ್ ಅವರು ಹಾಡಿರುವ ಶರಾರಾ…ಶರಾರಾ ಎಂಬ ಹಿಂದಿ ಗೀತೆಗೆ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತವಾಗಿದೆ. ಈ ವೇಳೆ ವೇದಿಕೆ ಮೇಲೆ ಏಕಾಏಕಿ ಕುಸಿದು ಬಿದ್ದಿದ್ದಾಳೆ.
ಕೂಡಲೇ ಅಲ್ಲಿದ್ದ ಸಂಬಂಧಿಕರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಸಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಕೋವಿಡ್ ವ್ಯಾಕ್ಸಿನ್ ಎಫೆಕ್ಟ್ನಿಂದಲೇ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಕಮೆಂಟಿಸಿದ್ದಾರೆ.